ಮಂಗಳೂರು:ಅನ್ಲಾಕ್ ಬಳಿಕ ಒಂದೊಂದೇ ಕಾರ್ಯಚಟುವಟಿಕೆಗಳು ಪುನಾರಂಭ ಆಗ್ತಿವೆ. ಕೊರೊನಾ ಲಾಕ್ಡೌನ್ನಿಂದ ಬಂದ್ ಆಗಿದ್ದ ಖಾಸಗಿ ಬಸ್ ಸಂಚಾರ ಸಹ ಇಂದು ಬೆಳಗ್ಗೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭವಾಗಿದೆ.
ಲಾಕ್ಡೌನ ಸಂದರ್ಭದಲ್ಲಿ ಸ್ಥಗಿತವಾಗಿದ್ದ ಖಾಸಗಿ ಬಸ್ ಸೇವೆ ಜೂನ್ ಕೊನೆಯ ವಾರದಲ್ಲಿ ಆರಂಭಿಸಲು ಅನುಮತಿ ನೀಡಲಾಗಿತ್ತು. ಆದರೆ ಬಸ್ ನಿರ್ವಹಣೆ, ತೆರಿಗೆ ಮತ್ತು ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಆಗ್ರಹಿಸಿ ತಕ್ಷಣದಿಂದ ಆರಂಭಿಸಲು ಖಾಸಗಿ ಬಸ್ ಮಾಲೀಕರು ನಿರಾಕರಿಸಿದ್ದರು. ಬಸ್ನಲ್ಲಿ ಶೇ.50 ರಷ್ಟು ಮಂದಿಗೆ ಪ್ರಯಾಣಕ್ಕೆ ಅವಕಾಶ ನೀಡಿರುವುದರಿಂದ ಸಾರಿಗೆ ಪ್ರಾಧಿಕಾರ ಕೊರೊನಾ ಲಾಕ್ಡೌನ್ ನಿಯಮಾವಳಿ ಮುಗಿಯುವ ತನಕ ಶೇ.20ರಷ್ಟು ಬಸ್ ದರ ಏರಿಕೆಗೆ ಅನುಮತಿ ನೀಡಿತ್ತು. ಇದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಖಾಸಗಿ ಬಸ್ ಸೇವೆ ಪುನಾರಂಭವಾಗಿದೆ. ಮಂಗಳೂರಿನಿಂದ ಬೆಳಗ್ಗೆಯಿಂದಲೇ ಖಾಸಗಿ ಬಸ್ಗಳು ನಗರ, ಉಡುಪಿ ಮತ್ತು ಜಿಲ್ಲೆಯ ವಿವಿಧೆಡೆ ಸಂಚರಿಸುತ್ತಿವೆ.