ಟಿಕೆಟ್ ದರ ಏರಿಸದಿದ್ದರೆ ಮಂಗಳೂರಲ್ಲಿ ಖಾಸಗಿ ಬಸ್ ಸೇವೆ ಬಂದ್: ಮಾಲೀಕರು ಎಚ್ಚರಿಕೆ - ವಿವಿಧ ಬೇಡಿಕೆಗೆ ಬಸ್ ಮಾಲೀಕರ ಆಗ್ರಹ
ಜೂನ್ ಬಳಿಕ ಬಸ್ ಸಂಚಾರ ಆರಂಭಿಸಬೇಕಾದಲ್ಲಿ ಆರು ತಿಂಗಳ ತೆರಿಗೆ ಕಡಿತಗೊಳಿಸಬೇಕು. ಬಸ್ ಟಿಕೆಟ್ ದರ ಹೆಚ್ಚಳ ಸೇರಿದಂತೆ ಅನೇಕ ಬೇಡಿಕೆಗಳನ್ನು ಪೂರೈಸಬೇಕು ಎಂದು ಬಸ್ ಮಾಲೀಕರು ಆಗ್ರಹಿಸಿದ್ದಾರೆ.
ಮಂಗಳೂರು: ಲಾಕ್ಡೌನ್ನಿಂದ ಸಾರಿಗೆ ಸಂಪರ್ಕ ಸ್ಥಗಿತಗೊಂಡಿದ್ದರಿಂದ ಬಸ್ ಮಾಲೀಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ತೆರಿಗೆ ಕಡಿತ, ಬಸ್ ದರ ಹೆಚ್ಚಳ ಸೇರಿದಂತೆ ಇತರೆ ಬೇಡಿಕೆಗಳು ಈಡೇರಿಸದಿದ್ದರೇ ಜೂನ್ ಬಳಿಕ ಖಾಸಗಿ ಪ್ರಯಾಣಿಕ ವಾಹನಗಳ ಓಡಾಟ ಸಾಧ್ಯವಿಲ್ಲ ಎಂದು ಬಸ್ ಮಾಲೀಕರು ಎಚ್ಚರಿಸಿದ್ದಾರೆ.
ಬಸ್ಗಳ ಸೇವೆ ಲಭ್ಯವಾದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ. ಹೀಗಾಗಿ, ಬಸ್ಗಳಲ್ಲಿ ಹೆಚ್ಚಿನ ಪ್ರಯಾಣಿಕರಿಗೆ ಅವಕಾಶವಿರುವುದಿಲ್ಲ. ಇದರಿಂದ ಬಸ್ ಮಾಲೀಕರಿಗೆ ನಷ್ಟವಾಗಲಿದೆ. ಜೂನ್ ಬಳಿಕ ಬಸ್ ಸೇವೆ ಲಭ್ಯವಾಗಬೇಕಾದರೇ ಆರು ತಿಂಗಳ ತೆರಿಗೆ ಕಡಿತಗೊಳಿಸಬೇಕು. ಬಸ್ ಟಿಕೆಟ್ ದರ ಹೆಚ್ಚಳ ಮಾಡಬೇಕು ಎಂದು ಬಸ್ ಮಾಲೀಕರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮೇ ಅಂತ್ಯದವರೆಗೆ ಬಸ್ ಓಡಿಸಲು ಸಾಧ್ಯವಿಲ್ಲ. ನಮ್ಮ ಎಲ್ಲಾ ಬೇಡಿಕೆಗಳು ಈಡೇರದಿದ್ದಲ್ಲಿ ಜೂನ್ ಬಳಿಕವೂ ಮಂಗಳೂರಿನಲ್ಲಿ ಖಾಸಗಿ ಬಸ್ ಸಂಚಾರ ಆರಂಭವಾಗುವುದಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸದಿದ್ದರೆ ಆರ್ಥಿಕವಾಗಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.