ಮಂಗಳೂರು:ಹೆಣ್ಣುಮಕ್ಕಳು ಹೊರೆಯೆಂಬ ಪರಿಸ್ಥಿತಿ ಇದೆ. ಇದಕ್ಕೂ ಲಿಂಗಾನುಪಾತಕ್ಕೂ ಸೂಕ್ಷ್ಮ ಸಂಬಂಧವಿದೆ. ಅಧ್ಯಯನದ ಪ್ರಕಾರ ದ.ಕ ಜಿಲ್ಲೆಯಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳು ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂದು ಲೀಡ್ ಸಂಸ್ಥೆಯ ಮುಖ್ಯಸ್ಥೆ ಮರ್ಲಿನ್ ಮಾರ್ಟಿಸ್ ಹೇಳಿದರು.
ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಆಗಿರುವ ಬಗ್ಗೆ ಕಾರಣ ಹುಡುಕಬೇಕಾಗಿದೆ: ಮರ್ಲಿನ್ ಮಾರ್ಟಿಸ್ - Seminar on Gender Equality in Mangaluru
ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳು ಕಡಿಮೆ ಸಂಖ್ಯೆಯಲ್ಲಿರುವುದರ ಹಿಂದಿರುವ ಕಾರಣ ಏನು ಎಂಬುದನ್ನು ಹುಡುಕಬೇಕಿಗಿದೆ. ಇದಕ್ಕೆ ಎನ್ಜಿಒ, ಅಧಿಕಾರಿಗಳು ಮಾತ್ರವಲ್ಲ ಪತ್ರಕರ್ತರು ಜಂಟಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಮಂಗಳೂರಿನಲ್ಲಿ ಲೀಡ್ ಸಂಸ್ಥೆಯ ಮುಖ್ಯಸ್ಥೆ ಮರ್ಲಿನ್ ಮಾರ್ಟಿಸ್ ಹೇಳಿದರು.
![ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಆಗಿರುವ ಬಗ್ಗೆ ಕಾರಣ ಹುಡುಕಬೇಕಾಗಿದೆ: ಮರ್ಲಿನ್ ಮಾರ್ಟಿಸ್ Press conference on gender bias in Mangaluru](https://etvbharatimages.akamaized.net/etvbharat/prod-images/768-512-5281142-thumbnail-3x2-hrs.jpg)
ಲಿಂಗ ಸೂಕ್ಷ್ಮತೆಯ ಬಗ್ಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳು ಕಡಿಮೆ ಸಂಖ್ಯೆಯಲ್ಲಿರುವುದರ ಹಿಂದಿರುವ ಕಾರಣ ಏನು ಎಂಬುದನ್ನು ಹುಡುಕಬೇಕಿಗಿದೆ. ಇದಕ್ಕೆ ಎನ್ಜಿಒ, ಅಧಿಕಾರಿಗಳು ಮಾತ್ರವಲ್ಲ ಪತ್ರಕರ್ತರು ಜಂಟಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗುವುದರಿಂದ ಬರೀ ಹೆಣ್ಣುಮಕ್ಕಳಿಗೆ ಮಾತ್ರ ಸಮಸ್ಯೆಯಲ್ಲ, ಇಡೀ ಸಮಾಜಕ್ಕೆ ತೊಂದರೆಯಾಗುತ್ತಿದೆ. ಎಷ್ಟೋ ಸಮುದಾಯದಲ್ಲಿ ಮದುವೆಯಾಗುವ ಗಂಡಿಗೆ ಹೆಣ್ಣು ಇಲ್ಲ ಎಂಬ ಬಹುದೊಡ್ಡ ಸಮಸ್ಯೆ ತಲೆದೋರಿದೆ. ಅಲ್ಲದೆ ಹೆಣ್ಣುಮಕ್ಕಳ ಮದುವೆಯ ವಯಸ್ಸು 24ರಿಂದ 21ಕ್ಕೆ ಇಳಿದಿದೆ. ಇದು ಹೆಣ್ಣುಮಕ್ಕಳ ಶಿಕ್ಷಣಕ್ಕೂ ತೊಂದರೆಯಾಗುತ್ತಿದೆ. ಅವರ ಬದುಕಿನ ಮೇಲೂ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.