ಕರ್ನಾಟಕ

karnataka

ETV Bharat / state

ದ.ಕ ಜಿಲ್ಲೆಯಲ್ಲಿ ಡೇಂಘಿ ಹರಡದಂತೆ ಮುನ್ನೆಚ್ಚರಿಕಾ ಕ್ರಮ: ಡಿಸಿ - ಮಂಗಳೂರು, ಡೆಂಗ್ಯೂ ಹರಡದಂತೆ ಮುನ್ನೆಚ್ಚರಿಕಾ ಕ್ರಮ, ದ.ಕ ಜಿಲ್ಲೆ, ಜಿಲ್ಲಾಧಿಕಾರಿ ಸಸಿಕಾಂಥ್ ಸೆಂಥಿಲ್, ದ.ಕ.ಜಿಲ್ಲೆಯ ಕಡಬ, ಮಂಗಳೂರಿನ ಗುಜ್ಜರಕೆರೆ ಹಾಗೂ ಅರೆಕೆರೆಬೈಲು ಪ್ರದೇಶ, ಈ ಟಿವಿ ಭಾರತ, ಕನ್ನಡ ವಾರ್ತೆ

ಸೊಳ್ಳೆ ಕಚ್ಚುವುದರಿಂದ ಡೇಂಘಿ ಜ್ವರ ಬರುತ್ತದೆ. ಅಲ್ಲದೆ ದ.ಕ. ಜಿಲ್ಲೆಯಲ್ಲಿ ಈ ಬಾರಿ ಬಿಟ್ಟು ಬಿಟ್ಟು ಮಳೆ ಬರುತ್ತಿರುವುದು ರೋಗ ಉಲ್ಬಣವಾಗಲು ಕಾರಣವಾಗುತ್ತಿದೆ. ಆದ್ದರಿಂದ ನಾಗರಿಕರು ಸುತ್ತಮುತ್ತಲಿನ ಪರಿಸರದಲ್ಲಿ ಹೆಚ್ಚು ಕಾಲ ನೀರು ನಿಲ್ಲದಂತೆ ಜಾಗ್ರತೆ ವಹಿಸಿದರೆ ಶೇ. 85ರಷ್ಟು ಪ್ರಮಾಣದಲ್ಲಿ ರೋಗ ತಡೆಗಟ್ಟಬಹುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

By

Published : Jul 17, 2019, 8:40 PM IST

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಡೇಂಘಿ ಜ್ವರ ಹರಡದಂತೆ ಈಗಾಗಲೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಡೇಂಘಿ ಸೊಳ್ಳೆಗಳು ನಿಂತ ನೀರಿನಲ್ಲಿ ಉತ್ಪತ್ತಿಯಾಗುವುದರಿಂದ ನಾಗರಿಕರು ಮನೆಯ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿಕೊಳ್ಳಿ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಈಗಾಗಲೇ ದ.ಕ. ಜಿಲ್ಲೆಯ ಕಡಬ, ಮಂಗಳೂರಿನ ಗುಜ್ಜರಕೆರೆ ಹಾಗೂ ಅರೆಕೆರೆಬೈಲು ಪ್ರದೇಶದಲ್ಲಿ ಡೇಂಘಿ ಪ್ರಮಾಣ ಅಧಿಕವಾಗಿ ಕಂಡು ಬಂದಿದೆ. ಇಡೀ ಜಿಲ್ಲೆಯಲ್ಲಿ ಒಟ್ಟು 352 ಡೇಂಘಿ ಪ್ರಕರಣ ಕಂಡು ಬಂದಿದ್ದು, ಈ ಪೈಕಿ 200 ಪ್ರಕರಣಗಳ ಜ್ವರಪೀಡಿತರು ಗುಣಮುಖರಾಗುತ್ತಿದ್ದಾರೆ ಎಂದರು.

ಸೊಳ್ಳೆ ಕಚ್ಚುವುದರಿಂದ ಡೇಂಘಿ ಜ್ವರ ಬರುತ್ತದೆ. ಅಲ್ಲದೆ ದ.ಕ. ಜಿಲ್ಲೆಯಲ್ಲಿ ಈ ಬಾರಿ ಬಿಟ್ಟು ಬಿಟ್ಟು ಮಳೆ ಬರುತ್ತಿರುವುದು ರೋಗ ಉಲ್ಬಣವಾಗಲು ಕಾರಣವಾಗುತ್ತಿದೆ. ಆದ್ದರಿಂದ ನಾಗರಿಕರು ಸುತ್ತಮುತ್ತಲಿನ ಪರಿಸರದಲ್ಲಿ ಹೆಚ್ಚು ಕಾಲ ನೀರು ನಿಲ್ಲದಂತೆ ಜಾಗ್ರತೆ ವಹಿಸಿದರೆ ಶೇ. 85ರಷ್ಟು ಪ್ರಮಾಣದಲ್ಲಿ ರೋಗ ತಡೆಗಟ್ಟಬಹುದು ಎಂದು ಹೇಳಿದರು.

ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

ಸೊಳ್ಳೆ ಕಡಿತದಿಂದ ಪಾರಾಗಲು ಇಡೀ ಮೈ ಮುಚ್ಚುವ ಬಟ್ಟೆಗಳನ್ನು ಧರಿಸುವುದು, ಮೈಗೆ ತೆಂಗಿನ ಎಣ್ಣೆ, ಒಡಮಸ್ ಮುಲಾಮು ಹಚ್ಚುವುದು, ಸೊಳ್ಳೆ ಪರದೆಗಳನ್ನು ಕಟ್ಟುವುದು ಇತ್ಯಾದಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳವುದು ಉತ್ತಮ. ಡೇಂಘಿ ಒಂದು ಸಾಂಕ್ರಾಮಿಕ ರೋಗವಾದರೂ ಅದರ ಬಗ್ಗೆ ಭಯ ಬೇಡ ಎಂದು ಜಿಲ್ಲಾಧಿಕಾರಿ ಹೇಳಿದರು.

For All Latest Updates

TAGGED:

ABOUT THE AUTHOR

...view details