ಕರ್ನಾಟಕ

karnataka

ETV Bharat / state

ಬಂಟ್ವಾಳದ ಸೂರಿ ಕುಮೇರ್​​ ಚರ್ಚ್​ನಲ್ಲಿ ಪ್ರಾರ್ಥನೆ ಪುನಾರಂಭ - Prayer in churches according to the guidelines

ಲಾಕ್​​​​ಡೌನ್ ಬಳಿಕ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ ಹಿನ್ನೆಲೆ ಬಂಟ್ವಾಳ ತಾಲೂಕು ಸೂರಿ ಕುಮೇರಿನ ಚರ್ಚ್​ನಲ್ಲಿ ಮಾರ್ಗಸೂಚಿ ಪಾಲನೆಯೊಂದಿಗೆ ಪ್ರಾರ್ಥನೆ ನಡೆಸಲಾಯಿತು.

Prayers resume in churches after lockdown
ಸೂರಿಕುಮೇರ್​​ ಚರ್ಚ್​ನಲ್ಲಿ ಮಾರ್ಗಸೂಚಿ ಪ್ರಕಾರ ಪ್ರಾರ್ಥನೆ ಪುನರಾರಂಭ

By

Published : Jun 15, 2020, 10:32 AM IST

ಬಂಟ್ವಾಳ :ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ ಹಿನ್ನೆಲೆತಾಲೂಕಿನ ಸೂರಿಕು ಮೇರುವಿನಲ್ಲಿರುವ ಸೇಂಟ್​​​ ಜೋಸೆಫ್ ಚರ್ಚ್​ನಲ್ಲಿ ಮಾರ್ಗಸೂಚಿ ಪ್ರಕಾರ ಭಾನುವಾರ ಪ್ರಾರ್ಥನೆ ನಡೆಸಲಾಯಿತು.

ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಸೂಚನೆಯಂತೆ ಪ್ರಾರ್ಥನೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬೆಳಗ್ಗೆ 8 ಗಂಟೆ, 10 ಗಂಟೆ ಮತ್ತು ಸಂಜೆ 4 ಗಂಟೆಗೆ ಸಮಯ ನಿಗದಿಪಡಿಸಿ ಬಲಿಪೂಜೆ ಸೇರಿದಂತೆ ಪ್ರಾರ್ಥನೆ ನಡೆದವು.

ಸರ್ಕಾರದ ಮಾರ್ಗಸೂಚಿಯಂತೆ 10 ವರ್ಷದ ಕೆಳಗಿನವರಿಗೆ ಮತ್ತು 65 ವರ್ಷದ ಮೇಲ್ಪಟ್ಟವರಿಗೆ ಪೂಜೆಯಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ. ಮಾಸ್ಕ್ ಧರಿಸದೇ ಬಂದವರಿಗೆ ಚರ್ಚ್ ಪಾಲನಾ ಸಮಿತಿಯವರು ಉಚಿತ ಮಾಸ್ಕ್​ ವಿತರಿಸಿದರು. ಚರ್ಚ್​ನ ಒಳಗೂ ಹೊರಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿತ್ತು. ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್​ ಅಳವಡಿಸಲಾಗಿತ್ತು.

ಚರ್ಚ್​ನ ಧರ್ಮಗುರುಗಳಾದ ಫಾದರ್ ಗ್ರೆಗರಿ ಪಿರೇರಾ ಪ್ರಾರ್ಥನೆಯಲ್ಲಿ ಭಾಗವಹಿಸಿದ ಭಕ್ತರಿಗೆ ನಿಯಮಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಉಪಾಧ್ಯಕ್ಷ ಎಲಿಯಾಸ್ ಪಿರೇರಾ ಮತ್ತು ಕಾರ್ಯದರ್ಶಿ ಮೇರಿ ಡಿಸೋಜಾ ಭಕ್ತರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿದರು.

For All Latest Updates

TAGGED:

ABOUT THE AUTHOR

...view details