ಕರ್ನಾಟಕ

karnataka

ETV Bharat / state

ಪ್ರವೀಣ್ ನೆಟ್ಟಾರು ಸಾಕಿದ್ದ ಶ್ವಾನ ಅನಾರೋಗ್ಯದಿಂದ ಸಾವು - Etv bharat kannada

ಪ್ರವೀಣ್ ನೆಟ್ಟಾರು ತಮ್ಮ ಮನೆಯಲ್ಲಿ ಶ್ವಾನವೊಂದನ್ನು ಸಾಕಿದ್ದರು. ಅತ್ಯಂತ ಅಕ್ಕರೆಯಿಂದ ಸಾಕಿದ್ದ ಶ್ವಾನ ಇದೀಗ ಮೃತಪಟ್ಟಿದೆ.

Praveen Nettaru's beloved dog died due to illness
ಪ್ರವೀಣ್ ನೆಟ್ಟಾರು ಸಾಕಿದ್ದ ಶ್ವಾನ ಅನಾರೋಗ್ಯದಿಂದ ಸಾವು

By

Published : Aug 9, 2022, 6:52 PM IST

ಸುಳ್ಯ:ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ನಾಯಕ ಹಾಗೂ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ದುಷ್ಕರ್ಮಿಗಳಿಂದ ಹತ್ಯೆಯಾಗಿ ತಿಂಗಳು ಸಹ ಆಗಿಲ್ಲ. ಈ ನಡುವೆ ಅವರು ಮನೆಯಲ್ಲಿ ಸಾಕಿದ್ದ ನಾಯಿಯೊಂದು ಮೃತಪಟ್ಟಿದೆ. ಪ್ರವೀಣ್ ನೆಟ್ಟಾರು ಈ ಹಿಂದಿನಿಂದಲೂ ಪ್ರಾಣಿ ಪ್ರಿಯರಾಗಿದ್ದರು.

ಪ್ರವೀಣ್ ಅವರು ತಮ್ಮ ಮನೆಯಲ್ಲಿ ಶ್ವಾನವೊಂದನ್ನು ಸಾಕಿದ್ದರು. ಪ್ರವೀಣ್ ನಿಧನದ ಬಳಿಕ ಕಳೆದ ಕೆಲವು ದಿನಗಳಿಂದ ಈ ಶ್ವಾನ ಅನಾರೋಗ್ಯಕ್ಕೆ ತುತ್ತಾಗಿತ್ತು ಎನ್ನಲಾಗುತ್ತಿದೆ. ಇದೀಗ ಆ ಶ್ವಾನ ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಪ್ರವೀಣ್ ಅವರ ಕುಟುಂಬದವರೂ ಇದನ್ನು ದೃಢಪಡಿಸಿದ್ದಾರೆ.

ಪ್ರವೀಣ್ ನೆಟ್ಟಾರು ಸಾಕಿದ್ದ ನಾಯಿ ಮರಿಗಳು

ಪ್ರವೀಣ್ ನೆಟ್ಟಾರು ಹತ್ಯೆಯಾಗುವ ಕೆಲವು ದಿನಗಳ ಹಿಂದೆ ಬೀದಿಯಲ್ಲಿದ್ದ ಎರಡು ನಾಯಿ ಮರಿಗಳನ್ನು ರಕ್ಷಿಸಿದ್ದರು. ಈ ಕುರಿತಂತೆ ಸ್ವತಃ ಪ್ರವೀಣ್ ಅವರೇ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಫೋಟೋ ಸಹಿತ ಈ ಮಾಹಿತಿ ಪ್ರಕಟಿಸಿದ್ದರು. 'ಯಾರೂ ಮೂಕ ಪ್ರಾಣಿಗಳನ್ನು ದಾರಿಯಲ್ಲಿ ಬಿಡಬೇಡಿ, ಅವುಗಳನ್ನು ದಾರಿಯಲ್ಲಿ ಬಿಡುವ ಹೀನಾಯ ಮತ್ತು ದುಷ್ಟ ಪ್ರವೃತ್ತಿ ಮಾಡಬೇಡಿ. ನನಗೆ ಒಂದು ಜೀವ ಉಳಿಸಿದ ಸಾರ್ಥಕತೆ ಇದೆ' ಎಂದು ಪ್ರವೀಣ್ ಪೋಸ್ಟ್​ ಹಾಕಿದ್ದರು.

ಇದನ್ನೂ ಓದಿ:ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಆರೋಪಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು

ABOUT THE AUTHOR

...view details