ಮಂಗಳೂರು: ಇಲ್ಲಿನ ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಅವರು ಗಾಂಧಿ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದು ಎಲ್ಲಾ ಸಮಸ್ಯೆಗಳಿಗೂ ಮಹಾತ್ಮ ಗಾಂಧೀಜಿ ಅವರಂತೆ ಸತ್ಯಾಗ್ರಹ, ಉಪವಾಸಗಳೇ ಪರಿಹಾರವೆಂದು ನಂಬಿದ್ದಾರೆ.
ಅಪ್ಪಟ ಗಾಂಧಿವಾದಿ ಪ್ರಸನ್ನ ಹೆಗ್ಗೋಡು ಇಂದಿನ ಆಧುನಿಕ ಕಾಲಘಟ್ಟದಲ್ಲಿ ಯುವಕರು ಉದ್ಯೋಗದಿಂದ ವಂಚಿತರಾಗುತ್ತಿರುವ ಪರಿಸ್ಥಿತಿಯ ವಿರುದ್ಧ ಪ್ರತಿಭಟಿಸಿದ್ದಾರೆ. ಮಂಗಳೂರಿನ ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್ನಲ್ಲಿ ಉದ್ಯೋಗ ಸೃಷ್ಟಿ ಮಾಡಿ ಆರ್ಥಿಕತೆ ಸುಧಾರಣೆ ಮಾಡಿ ಎಂದು ಪವಿತ್ರ ಆರ್ಥಿಕತೆ ಎಂಬ ವಿಶಿಷ್ಟ ಸತ್ಯಾಗ್ರಹ ಹಾಗೂ ಸಂವಾದ ನಡೆಸಿದರು.