ಕರ್ನಾಟಕ

karnataka

ETV Bharat / state

ಪವರ್​​ ಲಿಫ್ಟಿಂಗ್​​ ಚಾಂಪಿಯನ್​​ಶಿಪ್​​​​​: ಮಂಗಳೂರಿನ ಪ್ರದೀಪ್​​ ಕುಮಾರ್​ಗೆ ಚಿನ್ನ - Mangalore

ಜುಲೈ 13 ಮತ್ತು 14ರಂದು ಭದ್ರಾವತಿಯ ಲಯನ್ಸ್ ಕಣ್ಣಿನ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಚಾಂಪಿಯನ್​​ಶಿಪ್-2019 ಸ್ಪರ್ಧಾ ಕೂಟದಲ್ಲಿ ಮಂಗಳೂರಿನ ಪ್ರದೀಪ್ ಕುಮಾರ್ ಆಚಾರ್ಯ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಪವರ್​ ಲಿಫ್ಟಿಂಗ್ ಚಾಂಪಿಯನ್ ಶಿಪ್​: ಮಂಗಳೂರಿನ ಪ್ರದೀಪ್ ಕುಮಾರ್​ಗೆ ಚಿನ್ನ

By

Published : Jul 15, 2019, 4:44 PM IST

ಮಂಗಳೂರು: ಭದ್ರಾವತಿಯಲ್ಲಿ ನಡೆದ ರಾಜ್ಯ ಮಟ್ಟದ ಹಿರಿಯರ ಪವರ್​ ಲಿಫ್ಟಿಂಗ್ ಚಾಂಪಿಯನ್​​ಶಿಪ್​​ನಲ್ಲಿ ಮಂಗಳೂರಿನ ಪ್ರದೀಪ್ ಕುಮಾರ್ ಆಚಾರ್ಯ ಸ್ವರ್ಣ ಪದಕದೊಂದಿಗೆ ಬಲಿಷ್ಠ ವ್ಯಕ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜುಲೈ 13 ಮತ್ತು 14ರಂದು ಭದ್ರಾವತಿಯ ಲಯನ್ಸ್ ಕಣ್ಣಿನ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಚಾಂಪಿಯನ್​​ಶಿಪ್-2019 ಸ್ಪರ್ಧಾ ಕೂಟದಲ್ಲಿ ಅವರು ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಪ್ರದೀಪ್ ಆಚಾರ್ಯ 83 ಕೆಜಿ ವಿಭಾಗದಲ್ಲಿ 770 ಕೆಜಿ ಭಾರ ಎತ್ತಿ ಚಿನ್ನದ ಪದಕದೊಂದಿಗೆ ಬಲಿಷ್ಠ ವ್ಯಕ್ತಿ ಪ್ರಶಸ್ತಿ ಗಳಿಸಿದ್ದಾರೆ. ಅವರ ಈ ಸಾಧನೆಗೆ ಸತೀಶ್ ಕುಮಾರ್ ತರಬೇತಿ ನೀಡಿದ್ದರು‌.

ABOUT THE AUTHOR

...view details