ಮಂಗಳೂರು: ಕೆನಡಾದ ಸೇಂಟ್ ಜಾನ್ಸ್ ನ್ಯೂಫೌಂಡ್ ಲ್ಯಾಂಡ್ನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ 2 ಚಿನ್ನದ ಪದಕ ಗಳಿಸಿದ ಪ್ರದೀಪ್ ಕುಮಾರ್ ಆಚಾರ್ಯ ಅವರನ್ನು ಮಂಗಳೂರು ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಅಭಿನಂದಿಸಿದ್ದಾರೆ.
ಪವರ್ ಲಿಫ್ಟಿಂಗ್ನಲ್ಲಿ ಚಿನ್ನದ ಪದಕ ಗೆದ್ದ ಚಾಂಪಿಯನ್ಗೆ ಮಂಗಳೂರು ಕಮಿಷನರ್ ಅಭಿನಂದನೆ - ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್
ಕೆನಡಾದ ಸೇಂಟ್ ಜಾನ್ಸ್ ನ್ಯೂ ಫೌಂಡ್ಲ್ಯಾಂಡ್ನಲ್ಲಿ ನಡೆದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ಪ್ರದೀಪ್ ಕುಮಾರ್ ಅವರನ್ನ ಮಂಗಳೂರು ಪೊಲೀಸ್ ಕಮಿಷನರ್ ಅಭಿನಂದಿಸಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರ್ ಅಭಿನಂದನೆ
ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪ್ರದೀಪ್ ಕುಮಾರ್ ಆಚಾರ್ಯ ಅವರಿಗೆ ಶಾಲು ಹೊದಿಸಿ ಅಭಿನಂದಿಸಿದ ಕಮಿಷನರ್, ಪ್ರದೀಪ್ ಅವರು ಯುವಜನಾಂಗಕ್ಕೆ ಪ್ರೇರಣೆ ಎಂದು ಶ್ಲಾಘಿಸಿದ್ದಾರೆ. ಸೆ.15ರಿಂದ 21ರವರೆಗೆ ಕೆನಡಾದ ಸೇಂಟ್ ಜಾನ್ಸ್ ನ್ಯೂ ಫೌಂಡ್ಲ್ಯಾಂಡ್ನಲ್ಲಿ ನಡೆದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಪ್ರದೀಪ್ ಅವರು ಎರಡು ಚಿನ್ನ ಪದಕ ಗೆದ್ದುಕೊಂಡಿದ್ದಾರೆ.
Last Updated : Sep 28, 2019, 10:17 PM IST