ಬೆಳ್ತಂಗಡಿ:ನೆರಿಯ ಗ್ರಾಮದ ಅಣಿಯೂರಿನಿಂದ ಕಾಟಾಜೆ, ಪರ್ಪಳಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿ ಕಳೆದ ತಿಂಗಳಿನಿಂದ ನಡೆಯುತ್ತಿದೆ. ಈ ನಡುವೆ ಭಾರಿ ಮಳೆಗೆ ವಿದ್ಯುತ್ ಕಂಬಗಳು ರಸ್ತೆಗೆ ಸಾಲಾಗಿ ಬಿದ್ದಿವೆ.
ಈ ರಸ್ತೆಯ ಪಕ್ಕದಲ್ಲಿ ವಿದ್ಯುತ್ ಕಂಬಗಳು ಸೇರಿದಂತೆ ಖಾಸಗಿ ವಿದ್ಯುತ್ ಉತ್ಪಾದನಾ ಘಟಕಗಳ ವಿದ್ಯುತ್ ಪೂರೈಕೆ ಕಂಬಗಳು ಇವೆ. ವಿದ್ಯುತ್ ಕಂಬಗಳ ಬುಡದವರೆಗೂ ರಸ್ತೆ ನಿರ್ಮಾಣಕ್ಕೆ ಗುಡ್ಡ ಕೊರೆದು ಗುತ್ತಿಗೆದಾರರು ಬೇಜವಾಬ್ದಾರಿ ವಹಿಸಿದ್ದಾರೆ ಎನ್ನಲಾಗಿದೆ. ವಾರದಿಂದ ಮಳೆ ಸುರಿಯುತ್ತಿದ್ದು, ಕಾಟಾಚಾರದ ಕಾಮಗಾರಿಯಿಂದ ವಿದ್ಯುತ್ ಕಂಬಗಳು ರಸ್ತೆ ಮೇಲೆ ಕುಸಿದು ಬಿದ್ದಿವೆ. ಇದರಿಂದ ಜನರಿಗೆ ಸಂಚರಿಸಲು ಕಷ್ಟವಾಗುತ್ತಿದೆ.