ಬೆಳ್ತಂಗಡಿ (ದ.ಕ):ತಾಲೂಕಿನ ಅಂಡಿಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವ್ಯ ಗ್ರಾಮದ ಬೀಜದಡಿ ಎಂಬಲ್ಲಿ ಗಾಳಿ-ಮಳೆಗೆ ಕೋಳಿ ಫಾರಂ ಚಾವಣಿ ಶೀಟ್ ಕುಸಿದು ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ.
ಗಾಳಿ-ಮಳೆಗೆ ಕೋಳಿ ಫಾರಂ ಚಾವಣಿ ಶೀಟ್ ಕುಸಿತ: ಲಕ್ಷಾಂತರ ಮೌಲ್ಯದ ಕೋಳಿಗಳ ಸಾವು - Mangalore News
ಗಾಳಿ ಮಳೆಗೆ ಇಲ್ಲಿನ ಬೀಜದಡಿ ಗ್ರಾಮದಲ್ಲಿನ ಕೋಳಿ ಫಾರಂ ಕಟ್ಟಡ ಕುಸಿದು ಬಿದ್ದಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸುಮಾರು 3,800 ಕೋಳಿಗಳು ಅವಶೇಷಗಳಡಿ ಸಿಲುಕಿ ಮೃತಪಟ್ಟಿವೆ ಎಂದು ಫಾರಂ ಮಾಲಿಕ ಸಂದೀಪ್ ಪೂಜಾರಿ ಅಲವತ್ತುಕೊಂಡರು.
ಗಾಳಿ-ಮಳೆಗೆ ಕೋಳಿ ಫಾರಂ ಕುಸಿತ...ಲಕ್ಷಾಂತರ ಮೌಲ್ಯದ ಕೋಳಿಗಳ ಸಾವು
ಬೀಜದಡಿ ನಿವಾಸಿ ಸಂದೀಪ್ ಪೂಜಾರಿ ಅವರ ಕೋಳಿ ಫಾರಂ ಘಟಕದಲ್ಲಿ ಸುಮಾರು 3,800 ಕೋಳಿಗಳಿದ್ದವು. ಮಧ್ಯಾಹ್ನದ ಗಾಳಿಗೆ ಕಲ್ಲಿನ ಕಂಬಗಳು ಕುಸಿದಿದ್ದು, ಚಾವಣಿ ಶೀಟ್ ಅಡಿ ನೂರಾರು ಕೋಳಿಗಳು ಮೃತಪಟ್ಟಿವೆ.
ಆರು ವರ್ಷಗಳಿಂದ ಕೋಳಿ ಫಾರಂ ನಡೆಸುತ್ತಿದ್ದೇನೆ. ಕಟ್ಟಡದ ಕಾಲಂ ಕುಸಿದು 10 ಲಕ್ಷ ರೂ.ಗೂ ಅಧಿಕ ನಷ್ಟ ಸಂಭವಿಸಿದೆ. ನನ್ನ ಜೀವನಕ್ಕೆ ಆಧಾರ ಆಗಿದ್ದ ಕೋಳಿ ಫಾರಂ ಧರೆಗುರುಳಿದೆ. ಸರ್ಕಾರದ ನೆರವು ನೀಡಬೇಕು ಎಂದು ಎಂದು ಸಂದೀಪ್ ಪೂಜಾರಿ ಮನವಿ ಮಾಡಿದ್ದಾರೆ.