ಹುಬ್ಬಳ್ಳಿ-ನಗರದಲ್ಲಿ ಇಂದು ಪೂರ್ವ ಸಂಚಾರ ಪೊಲೀಸರು ಅನವಶ್ಯಕವಾಗಿ ರಸ್ತೆಗಿಳಿದ ಬೈಕ್ ಹಾಗೂ ಕಾರ್ ಗಳನ್ನು ಸೀಜ್ ಮಾಡುವ ಮೂಲಕ ಲಾಕ್ಡೌನ್ ಬ್ರೇಕ್ ಮಾಡಿದವರಿಗೆ ಬಿಸಿಮುಟ್ಟಿಸಿದ್ದಾರೆ.
ಏಪ್ರಿಲ್ 15 ರಿಂದ ದೇಶೆದೆಲ್ಲೆಡೆ 2ನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದು, ನಿಯಮ ಉಲ್ಲಂಘನೆ ಮಾಡಿದವರಿಗೆ ಬಿಸಿ ಮುಟ್ಟಿಸಿದ್ದಾರೆ. ಅನಾವಶ್ಯಕವಾಗಿ ಯಾರು ಕೂಡಾ ಹೊರಗೆ ಬರಬಾರದು ಎಂಬ ನಿಟ್ಟಿನಲ್ಲಿ ಸಾಕಷ್ಟು ತಿಳುವಳಿಕೆ ನೀಡಿದರೂ ಕೂಡಾ ಜನ ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಪೊಲೀಸರು ಇಂದು ಅನಾವಶ್ಯಕವಾಗಿ ರಸ್ತೆಗಿಳಿದ ಸುಮಾರು 200 ಬೈಕ್ ಹಾಗೂ 20 ಕ್ಕಿಂತಲು ಅಧಿಕ ಕಾರುಗಳನ್ನು ಪೂರ್ವ ಸಂಚಾರಿ ಪೊಲೀಸ್ ಠಾಣೆಯ PSI ಶರಣ್ ದೇಸಾಯಿ ನೇತೃತ್ವದಲ್ಲಿ ಸೀಜ್ ಮಾಡಲಾಗಿದೆ.
ಅನವಶ್ಯಕವಾಗಿ ರಸ್ತೆಗಿಳಿದ 200ಕ್ಕೂ ಹೆಚ್ಚು ಬೈಕ್, 20ಕ್ಕೂ ಹೆಚ್ಚು ಕಾರುಗಳನ್ನು ಸೀಜ್ ಮಾಡಿದ ಪೊಲೀಸರು - corona outbreak
2ನೇ ಹಂತದ ಲಾಕ್ಡೌನ್ ಘೋಷಣೆ ಮಾಡಿದ್ದರೂ ಅನಾವಶ್ಯಕವಾಗಿ ರಸ್ತೆಗಿಳಿದ 200ಕ್ಕೂ ಹೆಚ್ಚು ಬೈಕ್ ಹಾಗೂ 20ಕ್ಕೂ ಹೆಚ್ಚು ಬೈಕ್ಗಳನ್ನು ಸಂಚಾರ ಪೊಲೀಸರು ಜಪ್ತಿ ಮಾಡಿದ್ದಾರೆ.
ಅನಾವಶ್ಯಕವಾಗಿ ರಸ್ತೆಗಿಳಿದ 200ಕ್ಕೂ ಹೆಚ್ಚು ಬೈಕ್ ಸೀಜ್
ಜಿಲ್ಲೆಯಲ್ಲಿ ಒಂದು ಕೊರೊನ ಪಾಸಿಟಿವ್ ಪ್ರಕರಣ ಇಲ್ಲ ಎಂದು ಆರಾಮಾಗಿದ್ದ ಜನತೆಗೆ ಒಂದೇ ಕುಟುಂಬದಲ್ಲಿ ಐವರಲ್ಲಿ ಪಾಸಿಟಿವ್ ಕಂಡು ಬಂದಿರುವುದಂದ ಜಿಲ್ಲೆಯನ್ನು ಹಾಟ್ಸ್ಪಾಟ್ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.