ಕರ್ನಾಟಕ

karnataka

ETV Bharat / state

ಉಳ್ಳಾಲ: ಕಡಲಿಗೆ ಕಸ ಸುರಿದ ಲಾರಿ ವಶಕ್ಕೆ - ಕಡಲಿಗೆ ಕಸ ಸುರಿದ ಲಾರಿ ಪೊಲೀಸ್ ವಶಕ್ಕೆ

ಕಡಲಿಗೆ ಕಸ ಸುರಿದ ಬಗ್ಗೆ ಉಳ್ಳಾಲ ನಗರಸಭೆ ದೂರು ನೀಡಿತ್ತು. ತನಿಖೆ ನಡೆಸಿದ ಪೊಲೀಸರು, ಕಸ ಸುರಿದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

Police seized a lorry that dumped garbage into the sea
ಕಡಲಿಗೆ ಕಸ ಸುರಿದ ಲಾರಿ ವಶಕ್ಕೆ

By

Published : Mar 12, 2021, 5:04 PM IST

ಮಂಗಳೂರು: ಉಳ್ಳಾಲ ಬಳಿ ಕಡಲಿಗೆ ತ್ಯಾಜ್ಯ ಸುರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೆ.ಎ 19 ಬಿ 7955 ನಂಬರಿನ ಲಾರಿಯಲ್ಲಿ ಒಂದು ಲೋಡ್ ತ್ಯಾಜ್ಯ ತಂದು ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಕಡಲಿಗೆ ಸುರಿಯಲಾಗಿತ್ತು. ತ್ಯಾಜ್ಯ ಸುರಿದ ವಿಡಿಯೋದೊಂದಿಗೆ ಉಳ್ಳಾಲ ನಗರಸಭೆ ಪೊಲೀಸ್ ಠಾಣೆಗೆ ದೂರು ನೀಡಿತ್ತು.

ಕಡಲಿಗೆ ಕಸ ಸುರಿಯುತ್ತಿರುವ ದೃಶ್ಯ

ಓದಿ : ಕೇರಳಿಗರಿಗೆ ಆರ್​​ಟಿಪಿಸಿಆರ್ ಪರೀಕ್ಷೆ ಬಳಿಕ ರಾಜ್ಯದೊಳಗೆ ಅನುಮತಿ: ದ.ಕ ಜಿಲ್ಲಾಧಿಕಾರಿ

ತನಿಖೆಗಿಳಿದ ಉಳ್ಳಾಲ ಪೊಲೀಸರು, ತ್ಯಾಜ್ಯ ಸುರಿದ ವಾಹನವನ್ನು ವಶಕ್ಕೆ ಪಡೆದು ಉಳ್ಳಾಲ ನಗರಸಭೆ ಆರೋಗ್ಯಾಧಿಕಾರಿಗೆ ಹಸ್ತಾಂತರಿಸಿದ್ದಾರೆ. ವಶಪಡಿಸಿಕೊಂಡ ಲಾರಿ ಉಳಾಯಿಬೆಟ್ಟುವಿನ ಉಸ್ಮಾನ್ ಎಂಬವರಿಗೆ ಸೇರಿದ್ದು, ಅಬ್ದುಲ್ ಖಾದರ್ ಎಂಬವರು ಇದನ್ನು ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.

ABOUT THE AUTHOR

...view details