ಕಡಬ:ದಿನಾಲು ಖಾಕಿತೊಟ್ಟು, ಲಾಠಿ ಹಿಡಿದು ಕಾನೂನು ಪಾಲನೆಯಲ್ಲಿ ತೊಡಗುತ್ತಿದ್ದ ಕಡಬ ಠಾಣಾಧಿಕಾರಿ ರುಕ್ಮ ನಾಯ್ಕ್ ನೇತೃತ್ವದ ಪೊಲೀಸರ ತಂಡ ಇಂದು ಮುಂಜಾನೆ ಗುದ್ದಲಿ, ಹಾರೆ, ಬುಟ್ಟಿಗಳನ್ನು ಹಿಡಿದು ಪೊಲೀಸ್ ಠಾಣಾ ಪರಿಸರದ ಸ್ವಚ್ಚತಾ ಕಾರ್ಯ ಕೈಗೊಂಡರು.
ಈಗಾಗಲೇ ಕಡಬ ಪ್ರದೇಶದಲ್ಲಿ ಕಾನೂನು ಪಾಲಿಸದೇ ಇರುವವರಿಗೆ ಸಿಂಹಸ್ವಪ್ನವಾಗಿರುವ ಕಡಬ ಪೊಲೀಸ್ ಠಾಣಾಧಿಕಾರಿ ರುಕ್ಮ ನಾಯ್ಕ್ ರ ನೇತೃತ್ವದ ಪೊಲೀಸರ ತಂಡವು ಸಮಾಜ ಸೇವೆಯಲ್ಲೂ ಒಂದು ಹೆಜ್ಜೆ ಮುಂದಿದೆ.