ಕರ್ನಾಟಕ

karnataka

ETV Bharat / state

ದಕ್ಷಿಣ ಕನ್ನಡ: ಜಿಲ್ಲೆಯಾದ್ಯಂತ ಎಸ್​ಡಿಪಿಐ, ಪಿಎಫ್ಐ ಮುಖಂಡರ ಮನೆ ಮೇಲೆ ಪೊಲೀಸ್ ದಾಳಿ - ಪುತ್ತೂರು ನಗರ ಪೊಲೀಸ್ ಠಾಣೆ

ದಕ್ಷಿಣಕನ್ನಡ ಜಿಲ್ಲೆಯ ಹಲವೆಡೆ ಪಿಎಫ್​ಐ ಮತ್ತು ಎಸ್​ಡಿಪಿಐ ಮುಖಂಡರ ಮನೆಗಳಿಗೆ ಹಾಗೂ ಕಚೇರಿಗಳ ಮೇಲೆ ಪೊಲೀಸರ ತಂಡ ದಾಳಿ ನಡೆಸಿದೆ.

ಪುತ್ತೂರಿನ ದರ್ಬೆ ವೃತ್ತದ ಬಳಿ ಪ್ರತಿಭಟನೆ
ಪುತ್ತೂರಿನ ದರ್ಬೆ ವೃತ್ತದ ಬಳಿ ಪ್ರತಿಭಟನೆ

By

Published : Sep 22, 2022, 3:41 PM IST

Updated : Sep 22, 2022, 4:29 PM IST

ಪುತ್ತೂರು(ದಕ್ಷಿಣ ಕನ್ನಡ): ರಾಷ್ಟ್ರೀಯ ತನಿಖಾ ದಳ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಮತ್ತು ಸ್ಥಳೀಯ ಪೊಲೀಸರ ತಂಡ ದಕ್ಷಿಣಕನ್ನಡ ಜಿಲ್ಲೆಯ ಹಲವೆಡೆ ಇಂದು ಮುಂಜಾನೆಯಿಂದಲೇ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದುಕೊಂಡಿದೆ.

ಎಸ್​ಡಿಪಿಐ ಮುಖಂಡರ ಮನೆ

ಪಿಎಫ್​ಐ ಮತ್ತು ಎಸ್​ಡಿಪಿಐ ಮುಖಂಡರ ಮನೆಗಳಿಗೆ ಹಾಗೂ ಕಚೇರಿಗಳಿಗೆ ದಾಳಿ ನಡೆಸಿದ ಪೊಲೀಸರ ತಂಡ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಪುತ್ತೂರಿನ ಸಾಮೆತ್ತಡ್ಕದಲ್ಲಿರುವ ಎಸ್​ಡಿಪಿಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ಖಾದರ್ ಮತ್ತು ಉಪ್ಪಿನಂಗಡಿಯ ಎಸ್​ಡಿಪಿಐ ಮುಖಂಡ ಆಯುಬ್ ಅಗ್ನಾಡಿ ಮನೆಯನ್ನು ಶೋಧ ಮಾಡಿರುವ ಪೊಲೀಸರು ಹಲವು ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

ಪೊಲೀಸರ ವಾಹನ

ಎಸ್​ಡಿಪಿಐ ಮುಖಂಡರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಪಿಎಫ್​ಐ ಮತ್ತು ಎಸ್​ಡಿಪಿಐ ಸಂಘಟನೆಯ ಕಾರ್ಯಕರ್ತರು ಪುತ್ತೂರಿನ ದರ್ಬೆ ವೃತ್ತದ ಬಳಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಸಾಮೆತ್ತಡ್ಕದ ಎಸ್​ಡಿಪಿಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ಖಾದರ್ ಎಂಬುವವರನ್ನು ಪೊಲೀಸರು ಇದೇ ಸಂದರ್ಭದಲ್ಲಿ ವಶಕ್ಕೆ ಪಡೆದು ವಿಚಾರಣೆಗಾಗಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಓದಿ:ಹುಬ್ಬಳ್ಳಿ: ಭಿಕ್ಷುಕರ ನೆಪದಲ್ಲಿ ಬಂದು ಚಿನ್ನ ಕದ್ದ ಕಳ್ಳಿಯರು.. ಸಿಸಿಟಿವಿಯಲ್ಲಿ ಕೃತ್ಯ ಸೆರೆ

Last Updated : Sep 22, 2022, 4:29 PM IST

ABOUT THE AUTHOR

...view details