ಬಂಟ್ವಾಳ(ದ.ಕ):ಗೋ ಅಕ್ರಮ ಸಾಗಾಟ ಕುರಿತು ಸುದ್ದಿಯಲ್ಲಿರ್ತಿದ್ದ ಬಂಟ್ವಾಳ ಹಾಗೂ ವಿಟ್ಲ ಲಾಕ್‌ಡೌನ್ ನಡುವೆಯೂ ಇದೇ ವಿಚಾರಕ್ಕೆ ಈಗ ಮತ್ತೆ ಸುದ್ದಿಯಾಗುತ್ತಿದೆ. ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಎಎಸ್ಐ ವಿನೋದ್ ರೆಡ್ಡಿ ನೇತೃತ್ವದಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ವಾಹನ ಮತ್ತು ಮೂರು ಹಸುಗಳನ್ನು ಪೊಲೀಸರು ವಿಟ್ಲದ ಒಕ್ಕೆತ್ತೂರಿನಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಲಾಕ್‌ಡೌನ್ ನಡುವೆಯೂ ಬಂಟ್ವಾಳದಲ್ಲಿ ಅಕ್ರಮ ಜಾನುವಾರುಗಳ ಸಾಗಾಟ.. - Cattle thieves in Bantwal
ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಎಎಸ್ಐ ವಿನೋದ್ ರೆಡ್ಡಿ ನೇತೃತ್ವದಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ವಾಹನ ಮತ್ತು ಮೂರು ಹಸುಗಳನ್ನು ಪೊಲೀಸರು ವಿಟ್ಲದ ಒಕ್ಕೆತ್ತೂರಿನಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಲಾಕ್‌ಡೌನ್ ನಡುವೆಯೂ ಬಂಟ್ವಾಳದಲ್ಲಿ ದನಗಳ್ಳರ ಪರಾಕ್ರಮ
ಈ ಸಂದರ್ಭ ವಾಹನದಲ್ಲಿದ್ದ ಮೂವರು ಪರಾರಿಯಾಗಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಅಳಿಕೆಯಿಂದ ಕಳವುಗೈದು ಒಕ್ಕೆತ್ತೂರಿನಿಂದ ಕೋಡಪದವು ರಸ್ತೆ ಮೂಲಕ ಸಾಲೆತ್ತೂರು ಕಡೆಗೆ ಬೆಳಗ್ಗಿನ ಜಾವ ಪಿಕಪ್ ವಾಹನದಲ್ಲಿ ಒಂದು ಹಸು ಮತ್ತು ಎರಡು ಕರುಗಳನ್ನು ಕೊಂಡೊಯ್ಯುತ್ತಿದ್ದಾಗ ದನಗಳ್ಳರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.