ಕರ್ನಾಟಕ

karnataka

ETV Bharat / state

ಕೈ ಮುರಿದುಕೊಂಡು ಸಂಕಷ್ಟದಲ್ಲಿದ್ದ ಒಂಟಿ ಮಹಿಳೆ ಮನೆವರೆಗೆ ಹೋಗಿ ದಿನಸಿ ನೀಡಿದ ಪೊಲೀಸರು - police provide food for a woman

ಕೈ ಮುರಿದುಕೊಂಡು ಮನೆಯಲ್ಲಿ ಕುಳಿತಿದ್ದ ಒಂಟಿ ಮಹಿಳೆಯ ಕಷ್ಟ ಅರಿತ ಪೊಲೀಸರು ಮನೆವರೆಗೂ ಹುಡುಕಿಕೊಂಡು ಹೋಗು ದಿನಸಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ಒಂಟಿ ಮಹಿಳೆಗೆ ಆಹಾರ ಸಾಮಾಗ್ರಿ ನೀಡಿ ಮಾನವೀಯತೆ ಮೆರೆದ ಆರಕ್ಷಕರು
ಒಂಟಿ ಮಹಿಳೆಗೆ ಆಹಾರ ಸಾಮಾಗ್ರಿ ನೀಡಿ ಮಾನವೀಯತೆ ಮೆರೆದ ಆರಕ್ಷಕರು

By

Published : Apr 15, 2020, 11:55 AM IST

ಸುಳ್ಯ(ದಕ್ಷಿಣ ಕನ್ನಡ): ಪೋಲೀಸರು ಒಂಟಿ ಮಹಿಳೆಯೊಬ್ಬಳಿಗೆ ಆಹಾರ ದಿನಸಿಯನ್ನು ನೀಡಿ ಮಾನವೀಯತೆ ತೋರಿಸಿದ ಘಟನೆ ಬೆಳ್ಳಾರೆ ಪೋಲಿಸ್ ಠಾಣಾ ವ್ಯಾಪ್ತಿಯ ಕಳಂಜ ಎಂಬಲ್ಲಿ ನಡೆದಿದೆ.

ಬೆಳ್ಳಾರೆ ಪೋಲಿಸ್ ಠಾಣಾ ವ್ಯಾಪ್ತಿಯ ಕಳಂಜ ಎಂಬಲ್ಲಿ ವನಜಾಕ್ಷಿ ಎಂಬ ಒಂಟಿ ಮಹಿಳೆಯೊಬ್ಬರು ವಾಸವಾಗಿದ್ದಾರೆ. ಕೈ ಮುರಿದುಕೊಂಡು ಮನೆಯಲ್ಲಿದ್ದ ವನಜಾಕ್ಷಿ ಅವರು ಆಹಾರಕ್ಕಾಗಿ ತೊಂದರೆ ಎದುರಿಸುತ್ತಿರುವುದನ್ನು ಮನಗಂಡ ಬೆಳ್ಳಾರೆ ಠಾಣಾಧಿಕಾರಿ ಅಂಜನೇಯ ರೆಡ್ಡಿ ಮತ್ತು ಸಿಬ್ಬಂದಿ ಅಗತ್ಯ ಸಾಮಗ್ರಿಯನ್ನು ಮನೆವರೆಗೂ ಹುಡುಕಿಕೊಂಡು ಹೋಗಿ ಕೊಟ್ಟಿದ್ದಾರೆ.

ಕೊರೊನಾ ಲಾಕ್​ಡೌನ್​ ನಡುವೆ ತೀವ್ರ ಕೆಲಸದ ಒತ್ತಡದಲ್ಲೂ ಪೋಲೀಸರು ತೋರಿಸಿದ ಮಾನವೀಯ ಕಾರ್ಯಕ್ಕೆ ಮಹಿಳೆಯ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ABOUT THE AUTHOR

...view details