ಕರ್ನಾಟಕ

karnataka

ETV Bharat / state

ಪ್ರತಿಭಟನೆಗೆ ಸಜ್ಜಾದ ಪಿಎಫ್ಐ ಕಾರ್ಯಕರ್ತರು.. ಅವಕಾಶ ನೀಡದೆ ಹಿಮ್ಮೆಟ್ಟಿಸಿದ ಪೊಲೀಸರು..

ವಾಟ್ಸ್ಆ್ಯಪ್ ಗ್ರೂಪ್​ಗಳಲ್ಲಿ ಕೋಮುದ್ವೇಷ ಬೀರುವ ಸಂದೇಶ ರವಾನಿಸಿರುವ ಆರೋಪದ ಮೇಲೆ ಝಾಕೀರ್ ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದನ್ನು ವಿರೋಧಿಸಿ ಪ್ರತಿಭಟನೆಗೆ ಯತ್ನಿಸಿದ್ದ ಪಿಎಫ್‌ಐ ಕಾರ್ಯಕರ್ತರನ್ನು ಪೊಲೀಸರು ತಡೆದು ಹಿಮ್ಮೆಟ್ಟಿಸಿದ ಘಟನೆ ಇಂದು ಉಳ್ಳಾಲದಲ್ಲಿ ಜರುಗಿತು.

ಪಿ.ಎಫ್.ಐ

By

Published : Sep 2, 2019, 11:05 PM IST

ಮಂಗಳೂರು: ವಾಟ್ಸ್ಆ್ಯಪ್ ಗ್ರೂಪ್​ಗಳಲ್ಲಿ ಕೋಮುದ್ವೇಷ ಬೀರುವ ಸಂದೇಶ ರವಾನಿಸಿರುವ ಆರೋಪದ ಮೇಲೆ ಝಾಕೀರ್ ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದನ್ನು ವಿರೋಧಿಸಿ ಪ್ರತಿಭಟನೆಗೆ ಯತ್ನಿಸಿದ್ದ ಪಿಎಫ್‌ಐ ಕಾರ್ಯಕರ್ತರನ್ನು ಪೊಲೀಸರು ತಡೆದು ಹಿಮ್ಮೆಟ್ಟಿಸಿದ ಘಟನೆ ಇಂದು ಉಳ್ಳಾಳದಲ್ಲಿ ಜರುಗಿತು.

ಉಳ್ಳಾಲ ನಿವಾಸಿ ಝಾಕೀರ್ ವಾಟ್ಸ್ಆ್ಯಪ್​ನಲ್ಲಿ ಕೋಮುದ್ವೇಷ ಬಿತ್ತುವ ಸಂದೇಶ ರವಾನಿಸುತ್ತಿದ್ದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಆತನ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲಿಸಿದಾಗ, ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿತ್ತು.ಇದನ್ನು ವಿರೋಧಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಝಾಕೀರ್​ನನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆಗೆ ಯತ್ನಿಸಿದ್ದರು. ಆದರೆ, ಪೊಲೀಸರು ಪ್ರತಿಭಟನೆ ನಡೆಸಲು ಅವಕಾಶ ನೀಡದೆ ಕಾರ್ಯಕರ್ತರನ್ನು ಸ್ಥಳದಿಂದ ಹಿಮ್ಮೆಟ್ಟಿಸಿದರು.

ಈ ವೇಳೆ ಉಳ್ಳಾಲ ಪೊಲೀಸ್ ಠಾಣೆಯ ಬಳಿ ಭಾರಿ ಪೊಲೀಸ್ ಬಂದೋಬಸ್ತ್​ ಮಾಡಲಾಗಿತ್ತು.

ABOUT THE AUTHOR

...view details