ಪುತ್ತೂರು: ನಗರದ ಠಾಣೆಯ ಸಿಬ್ಬಂದಿ ಶಿವರಾಮ್ (54) ಅವರು ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
ಪುತ್ತೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಶಿವರಾಮ್ ನಿಧನ - ಪುತ್ತೂರು ಪೊಲೀಸ್ ಕಾನ್ಸ್ಟೇಬಲ್ ನಿಧನ
ಪುತ್ತೂರು ನಗರದ ಠಾಣೆಯ ಸಿಬ್ಬಂದಿ ಶಿವರಾಮ್ (54) ಅವರು ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
ಮೂಲತಃ ಮಂಡ್ಯದವರಾಗಿದ್ದ ಶಿವರಾಮ್ ಅವರು ಬಂಟ್ವಾಳ ತಾಲೂಕಿನ ಪುಂಜಲಕಟ್ಟೆಯಲ್ಲಿ ವಾಸವಿದ್ದರು. ಕಳೆದ ಎರಡು ವರ್ಷಗಳಿಂದ ಪುತ್ತೂರು ನಗರ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು 4 ತಿಂಗಳ ಹಿಂದೆ ಅನಾರೋಗ್ಯಕ್ಕೊಳಗಾಗಿದ್ದರು. ಅವರನ್ನು ಇತ್ತೀಚೆಗೆ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಇನ್ನು, ಶಿವರಾಮ್ ಅವರು ಕಡಬ, ಬಂಟ್ವಾಳ, ವೇಣೂರು ಮತ್ತು ಪುಂಜಾಲಕಟ್ಟೆ ಠಾಣೆಗಳಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.