ಉಳ್ಳಾಲ (ಮಂಗಳೂರು): ಮಂಗಳೂರು ಪೊಲೀಸ್ ಕಮೀಷನರ್ ಮತ್ತು ಡಿಸಿಪಿ ಜಂಟಿ ದಾಳಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ತಲಪಾಡಿ ಟೋಲ್ ಬೂತ್ನಲ್ಲಿ ತೆರಳುತ್ತಿದ್ದ ಲಾರಿಯನ್ನು ಸ್ಕೂಟರಿನಲ್ಲಿ ತೆರಳಿ ಹಿಡಿದಿದ್ದಾರೆ.
ಮಂಗಳೂರು ಪೊಲೀಸ್ ಕಮೀಷನರ್ ಶಶಿ ಕುಮಾರ್ ಮತ್ತು ಡಿಸಿಪಿ ಹರಿರಾಂ ಇಬ್ಬರು ಒಂದೇ ಸ್ಕೂಟರಿನಲ್ಲಿ ತಲಪಾಡಿ ಗಡಿಭಾಗಕ್ಕೆ ಪರಿಶೀಲನೆಗೆಂದು ಬಂದಿದ್ದರು. ಈ ಸಂದರ್ಭ ಟೋಲ್ ದಾಟಿ ಕೇರಳ ಕಡೆಗೆ ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ಲಾರಿಯನ್ನು ಕಂಡು ಅಡ್ಡಗಟ್ಟಿದ್ದಾರೆ.
ಈ ವೇಳೆ ಪೊಲೀಸ್ ಕಮೀಷನರ್ ಎಂದು ತಿಳಿಯದೆ ಮರಳು ಲಾರಿಗೆ ಎಸ್ಕಾಟ್೯ ನೀಡುತ್ತಿದ್ದ ಕಾರಿನಲ್ಲಿದ್ದವರು ಅಡ್ಡಗಟ್ಟಲು ಮುಂದಾದಾಗ ಕಮೀಷನರ್, ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ಮರಳು ಲಾರಿಗೆ ಎಸ್ಕಾಟ್೯ ನೀಡುತ್ತಿದ್ದ ಚಂದ್ರ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ಥಳದಲ್ಲಿದ್ದ ಟೋಲ್ ಸಿಬ್ಬಂದಿ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಮರಳು ಸಾಗಾಟದ ಲಾರಿಯನ್ನು ಮಾತ್ರ ತಲಪಾಡಿ ಟೋಲ್ನಲ್ಲಿಯೇ ನಿಲ್ಲಿಸಲಾಗಿದೆ.
ಈ ವೇಳೆ ಅಕ್ರಮ ಮರಳು ಸಾಗಾಟ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ.
ಇದನ್ನೂ ಓದಿ:ಅಕ್ರಮ ಮಾಂಸ ಸಾಗಾಟ : ದನದ ಮಾಂಸವಾ, ಎತ್ತಿನ ಮಾಂಸವಾ ಎನ್ನುವುದೇ ಸಂಶಯ..