ಮಂಗಳೂರು; ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ದೇವರ ಹಾಡು ಹಾಡುವ ಮೂಲಕ ಗಮನಸೆಳೆದರು.
ಮಂಗಳೂರಿನ ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಮಂಗಳೂರು ಪೊಲೀಸ್ ಕಮೀಷನರ್ ತಮ್ಮ ನಿವಾಸದ ಬಳಿಯಲ್ಲಿರುವ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವರ ದರ್ಶನ ಪಡೆದು ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗೆ ಆಗಮಿಸಿದ್ದರು.
ಮಂಗಳೂರಿನಲ್ಲಿ ಪೊಲೀಸ್ ಕಮೀಷನರ್ ಮೋಡಿ ವೇದಿಕೆಯಲ್ಲಿ ದೇವರ ಹಾಡುಗಳ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಅಲ್ಲಿಗೆ ಬಂದ ಪೊಲೀಸ್ ಕಮೀಷನರ್ ಅವರು ಎರಡು ಭಕ್ತಿ ಗೀತೆಗಳನ್ನು ಹಾಡಿದರು. ಮಂಗಳೂರು ನಗರ ಪೊಲೀಸ್ ಕಮೀಷನರ್ ಅವರ ಹಾಡಿಗೆ ನೆರೆದಿದ್ದ ಶ್ರೋತೃಗಳು ಪುಳಕಿತರಾದರು.
ಭಕ್ತಿ ಗೀತೆ ಹಾಡಿದ ಬಳಿಕ ಪೊಲೀಸ್ ಕಮೀಷನರ್, ಸಂಗೀತ ನೀಡಿದ ಸಂಗೀತಗಾರರಿಗೆ ಖುದ್ದಾಗಿ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ದೇವಾಲಯದ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ ಕಮೀಷನರ್ಗೆ ಸ್ಮರಣಿಕೆ ನೀಡಿ ಗೌರವಿಸಿದರು.