ಮಂಗಳೂರು : ಕೋವಿಡ್ ಕರ್ಫ್ಯೂ ನಿಯಮಗಳ ಬಗ್ಗೆ ಜನರಿಗೆ ಸಾಕಷ್ಟು ಗೊಂದಲಗಳಿವೆ. ಈ ಬಗ್ಗೆ ಯಾರಲ್ಲಿ ಕೇಳಿ ಪರಿಹಾರ ಕಂಡುಕೊಳ್ಳಬೇಕೆಂಬ ಜಿಜ್ಞಾಸೆಯೂ ಇದೆ.
ಇದರ ಪರಿಹಾರಕ್ಕಾಗಿ ಸ್ವತಃ ಮಂಗಳೂರು ನಗರ ಪೊಲೀಸ್ ಕಮಿಷನರ್ 'ಪೊಲೀಸ್ ಆಯುಕ್ತರೊಂದಿಗೆ ಕೋವಿಡ್ ಸಂಭಾಷಣೆ' ಎಂದು ಫೇಸ್ಬುಕ್ ಲೈವ್ಗೆ ಬಂದು ಜನಸಾಮಾನ್ಯರ ಹಲವಾರು ಗೊಂದಲಗಳಿಗೆ ಉತ್ತರ ನೀಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಫೇಸ್ಬುಕ್ ಲೈವ್ನಲ್ಲಿ ಜನರ ಗೊಂದಲಕ್ಕೆ ತೆರೆ ಎಳೆಯುವ ಕಾರ್ಯ ಮಾಡಿದ್ದಾರೆ.
ಮೊದಲಿಗೆ ಕೋವಿಡ್ ಸೋಂಕು ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕೈಗೊಂಡ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿರುವ ಆಯುಕ್ತ ಶಶಿಕುಮಾರ್ ಎಫ್ಬಿಯಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ.
ಫೇಸ್ಬುಕ್ ಲೈವ್ನಲ್ಲಿ ನಗರ ಪೊಲೀಸ್ ಆಯುಕ್ತರ ಸಂವಾದ.. ಜೊತೆಗೆ ಸರ್ಕಾರ ಪೊಲೀಸ್ ಇಲಾಖೆ ಮಾತ್ರವೇ ಕೋವಿಡ್ ಸೋಂಕನ್ನು ಹೊಡೆದೋಡಿಸಲು ಸಾಧ್ಯವಿಲ್ಲ. ಜನಸಾಮಾನ್ಯರು ಸರ್ಕಾರ, ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿದಲ್ಲಿ ಮಾತ್ರ ಸೋಂಕು ನಿಯಂತ್ರಣಕ್ಕೆ ಬರಲು ಸಾಧ್ಯ. ಆದ್ದರಿಂದ ಎಲ್ಲಾ ನಾಗರಿಕರು ನೂರಕ್ಕೆ ನೂರು ಪ್ರತಿಶತ ಸಹಕರಿಸಬೇಕೆಂದು ವಿನಂತಿಸಿದ್ದಾರೆ.
ಪೊಲೀಸ್ ಕಮಿಷನರ್ ಅವರ ಈ ಫೇಸ್ಬುಕ್ ಲೈವ್‌ನ 24 ಸಾವಿರ ಮಂದಿ ವೀಕ್ಷಿಸಿದ್ದಾರೆ. ಅಲ್ಲದೆ ಪೊಲೀಸ್ ಆಯುಕ್ತರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.