ಕರ್ನಾಟಕ

karnataka

ETV Bharat / state

ಪ್ರೀತ್ಸೆ ಪ್ರೀತ್ಸೆ ಅಂತ ವಿದ್ಯಾರ್ಥಿನಿಗೆ ಕಾಡಿಸುತ್ತಿದ್ದ ಪಾಗಲ್​ ಪ್ರೇಮಿ ಅಂದರ್​

ಪ್ರೀತ್ಸೆ..ಪ್ರೀತ್ಸೆ ಅಂತ ವಿದ್ಯಾರ್ಥಿವೋರ್ವಳ ಹಿಂದೆ ಬಿದ್ದು ಕಾಡುತ್ತಿದ್ದ ಯುವಕನೋರ್ವನನ್ನು ಮಂಗಳೂರಿನ ವಿಟ್ಲದಲ್ಲಿ ಪೊಲೀಸರು ಬಂಧಿಸಿದ್ದಾರೆ.

By

Published : Feb 21, 2020, 11:25 PM IST

ಪಾಗಲ್​ ಪ್ರೇಮಿ ಅಂದರ್​
Police arrested accused

ಮಂಗಳೂರು:ಅಪ್ರಾಪ್ತ ವಯಸ್ಸಿನ ಬಾಲಕಿಗೆ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಪಾಗಲ್​ವೋರ್ವನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಪುಣಚ ಗ್ರಾಮದ ಮನೋಹರ ಬಂಧಿತ ಆರೋಪಿ. ಈತ ಏಳನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿವೋರ್ವಳಿಗೆ ಕಳೆದೊಂದು ವರ್ಷದಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ. ಇತ್ತೀಚೆಗೆ ಪೇಟೆಗೆ ಹೋಗಿ ವಾಪಸ್​ ಬರುವ ವೇಳೆ ಈತ ಬಾಲಕಿಗೆ ಕಿರುಕುಳ ನೀಡಿದ್ದ. ಈ ಬಗ್ಗೆ ಬಾಲಕಿಯ ಪಾಲಕರು ನೀಡಿದ ದೂರಿನ ಆಧಾರದ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

ABOUT THE AUTHOR

...view details