ಶಿರಸಿ (ಉತ್ತರಕನ್ನಡ): ಲಾಕ್ಡೌನ್ ಆದೇಶದ ನಡುವೆಯೂ ಜಿಲ್ಲೆಯ ಮುಂಡಗೋಡಿನ 2 ಮಸೀದಿಗಳಲ್ಲಿ ಗುಂಪು ಗುಂಪಾಗಿ ನಮಾಜ್ ಮಾಡುತ್ತಿದ್ದ ಮುಸ್ಲಿಂ ಸಮುದಾಯದ 15 ಮಂದಿಯನ್ನು ಮಸೀದಿಯಲ್ಲಿಯೇ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಕೊರೊನಾ: ಗುಂಪಾಗಿ ಸೇರಿ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ 15 ಮಂದಿ ದಸ್ತಗಿರಿ - shirasi news
ಕೊರೊನಾ ಹರಡುವ ಭೀತಿಯಿಂದ ದೇಶದಾದ್ಯಂತ ಲಾಕ್ಡೌನ್ ಆದೇಶ ಜಾರಿಯಾಗಿದ್ದು ಕೆಲವರು ಮಾತ್ರ ಈ ಆದೇಶವನ್ನು ಗಾಳಿಗೆ ತೂರಿ ರಸ್ತೆ ಮೇಲೆ ಓಡಾಡುವುದು ವರದಿಯಾಗಿತ್ತು. ಆದರೆ ಶಿರಸಿಯ ಬಳಿ 2 ಮಸೀದಿಯಲ್ಲಿ 15 ಮಂದಿ ಗುಂಪಾಗಿ ಸೇರಿ ಪ್ರಾರ್ಥನೆ ಸಲ್ಲಿದಲು ಮುಂದಾಗಿದ್ದರು. ಈ ಹಿನ್ನೆಲೆ ಅವರನ್ನು ಪೊಲೀಸರು ದಸ್ತಗಿರಿ ಮಾಡಿದ್ದು ವಿವಿಧ ಕಲಂಗಳ ಅಡಿ ಪ್ರಕರಣ ದಾಖಲಾಗಿದೆ.
ಕೊರೊನಾ: ಗುಂಪಾಗಿ ಸೇರಿ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ 15 ಮಂದಿ ದಸ್ತಗಿರಿ
ಬಳಿಕ ಅವರ ಮೇಲೆ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ. ಮುಂಡಗೋಡಿನ ಹುನಗುಂದ ಗ್ರಾಮದ ಜಾಮೀಯಾ ಮಸೀದಿ ಹಾಗೂ ವೀರಾಪುರದ ನೂರಾನಿ ಮಸೀದಿಯಲ್ಲಿ ಕೆಲ ಮುಸ್ಲಿಂಮರು ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತು ಪ್ರಾರ್ಥನೆ ಮಾಡುತ್ತಿದ್ದಾಗ, ಪೊಲೀಸರು ದಾಳಿ ನಡೆಸಿ ಅವರನ್ನು ದಸ್ತಗಿರಿ ಮಾಡಿ ವಿವಿಧ ಕಲಂ ಅಡಿ ಪ್ರಕರಣ ದಾಖಲಿಸಲಾಗಿದೆ.