ಉಳ್ಳಾಲ : ಉಳ್ಳಾಲ ಪುರಸಭೆಯ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ.
ಉಳ್ಳಾಲ ನಗರಸಭೆ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪಿ ಪೊಲೀಸ್ ವಶಕ್ಕೆ - Municipality of Ulala
ಉಳ್ಳಾಲ ಪುರಸಭೆಯ ಮಹಿಳಾ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ.
ಉಳ್ಳಾಲ ಚೆನ್ನಯರಗುಡ್ಡೆ ನಿವಾಸಿ ಮಹಮ್ಮದ್ ಶರೀಫ್ ಯು.ಬಿ (40) ವಶಕ್ಕೆ ಪಡೆಯಲಾಗಿತ್ತು. ಅಮಲು ಪದಾರ್ಥ ಸೇವಿಸಿ ನಿತ್ಯ ನಗರಸಭೆ ಕಚೇರಿಗೆ ಬರುವ ಈತ, ಮಹಿಳಾ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಈ ಕುರಿತು ಹಿಂದಿನ ಪೌರಾಯುಕ್ತೆ ನೀಡಿರುವ ದೂರಿನಂತೆ ನ್ಯಾಯಾಲಯದಲ್ಲಿ ಪ್ರಕರಣವಿದೆ. ಆದರೂ ಆರೋಪಿ ಪದೇ ಪದೆ ಕಚೇರಿಗೆ ತೆರಳಿ ಕಿರುಕುಳ ನೀಡುತ್ತಿದ್ದನು.
ಈ ಕುರಿತು ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸೋಮವಾರ ಸಂಜೆ ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ. ಅಮಲು ಪದಾರ್ಥ ಸೇವಿಸಿದ ಬಳಿಕ ವಿಚಿತ್ರವಾಗಿ ವರ್ತಿಸುವ ಈತ ಠಾಣೆಯೊಳಗೂ ಕೈಗಳನ್ನು ಬ್ಲೇಡಿನಿಂದ ಗೀರಿಕೊಂಡು ಪೊಲೀಸರಲ್ಲಿಯೂ ಭೀತಿ ಹುಟ್ಟುಹಾಕಿದ್ದಾನಂತೆ