ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಪೊಲೀಸ್‌ ಕಾರ್ಯಾಚರಣೆ.. 4 ದಿನದಲ್ಲಿ 498 ಕಾರುಗಳ ಟಿಂಟೆಡ್‌ ಗ್ಲಾಸ್ ತೆರವು.. - ಮಂಗಳೂರು ಟ್ರಾಫಿಕ್ ಪೊಲೀಸರು

ಮಂಗಳೂರು ಪೊಲೀಸ್ ಕಮೀಷನರ್ ಡಾ.ಪಿ ಎಸ್ ಹರ್ಷ ಅವರ ನಿರ್ದೇಶನದಂತೆ ಮಂಗಳೂರು ಟ್ರಾಫಿಕ್ ಪೊಲೀಸರು ಕಳೆದ ನಾಲ್ಕು ದಿನದಿಂದ ಟಿಂಟೆಡ್ ಗ್ಲಾಸ್ ಅಳವಡಿಸಿದ ಕಾರುಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಸದ್ಯ 498 ಕಾರುಗಳ ಟಿಂಟ್‌ ತೆರವು ಮಾಡಲಾಗಿದೆ.

ಟಿಂಟ್ ವಿರುದ್ಧ ಪೊಲೀಸ್ ಕಾರ್ಯಚರಣೆ

By

Published : Aug 30, 2019, 8:21 AM IST

ಮಂಗಳೂರು: ಕಾರಿನ ಗ್ಲಾಸ್​ಗೆ ಟಿಂಟ್ ಅಳವಡಿಸಬಾರದೆಂದು ಕಾನೂನಿದೆ. ಆದರೂ ಸಹ ಅದನ್ನು ಉಲ್ಲಂಘಿಸಿ ವಾಹನಗಳ ಗ್ಲಾಸ್​ ಮೇಲೆ ಟಿಂಟ್ ಅಳವಡಿಸಿದವರ ವಿರುದ್ಧ ಮಂಗಳೂರು ಪೊಲೀಸರು ಕಾರ್ಯಚರಣೆ ಆರಂಭಿಸಿದ್ದಾರೆ.

ಟಿಂಟ್ ವಿರುದ್ಧ ಪೊಲೀಸ್ ಕಾರ್ಯಚರಣೆ..

ಮಂಗಳೂರು ಪೊಲೀಸ್ ಕಮಿಷನರ್ ಡಾ.ಪಿ.ಎಸ್ ಹರ್ಷ ಅವರ ನಿರ್ದೇಶನದಂತೆ ಮಂಗಳೂರು ಟ್ರಾಫಿಕ್ ಪೊಲೀಸರು ಕಳೆದ ನಾಲ್ಕು ದಿನದಿಂದ ಟಿಂಟ್ ಗ್ಲಾಸ್ ಅಳವಡಿಸಿದ ಕಾರುಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.ನಾಲ್ಕು ದಿನದಲ್ಲಿ 498 ಕಾರುಗಳ ಟಿಂಟ್ ತೆರವು ಮಾಡಲಾಗಿದ್ದು, ಈಗಾಗಲೇ 49,800.ರೂ ದಂಡವನ್ನೂ ಸಂಗ್ರಹಿಸಲಾಗಿದೆ.

ABOUT THE AUTHOR

...view details