ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ‘ನೀ ತಾಂಟ್ರೆ ಬಾ ತಾಂಟ್’ ಟ್ರೋಲ್ ಹೆಸರಿನಲ್ಲಿ ಗುಂಪು ಘರ್ಷಣೆ ನಡೆಸಲು ಹುನ್ನಾರ ಮಾಡುತ್ತಿರುವ ಯೂಟ್ಯೂಬ್ ಖಾತೆಗಳು ಹಾಗೂ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
'ನೀ ತಾಂಟ್ರೆ ಬಾ ತಾಂಟ್’ ಟ್ರೋಲ್ ಮೂಲಕ ಗುಂಪು ಘರ್ಷಣೆಗೆ ಹುನ್ನಾರ: ಕಾನೂನು ಕ್ರಮಕ್ಕೆ ಮುಂದಾದ ಪೊಲೀಸರು - ನಕಲಿ ಟ್ರೋಲ್ ವಿಡಿಯೋ ವಿರುದ್ಧ ಕ್ರಮ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ‘ನೀ ತಾಂಟ್ರೆ ಬಾ ತಾಂಟ್’ ಟ್ರೋಲ್ ಹೆಸರಲ್ಲಿ ಗುಂಪು ಘರ್ಷಣೆ ನಡೆಸಲು ಹುನ್ನಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದೆ ಪಸರಿಸಿರುವ ‘ನೀ ತಾಂಟ್ರೆ ಬಾ ತಾಂಟ್’ ಟ್ರೋಲ್ ವಿಡಿಯೋವನ್ನು ಎಡಿಟ್ ಮಾಡಿ ಅಥವಾ ಹೊಸದಾಗಿ ಚಿತ್ರಣವನ್ನು ಮಾಡಿ ಯೂಟ್ಯೂಬ್ ನಲ್ಲಿ ಹರಿಯಬಿಟ್ಟಿರುವುದು ಕಂಡುಬಂದಿದೆ. ಇದನ್ನು ನಕಲಿ ದಾಖಲೆಯಿಂದ ಸೃಷ್ಟಿಸಲಾಗಿದ್ದು, ಇದರ ಹಿಂದೆ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟು ಮಾಡುವ ಹುನ್ನಾರವಿತ್ತು. ಈ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.
ನಕಲಿ ಖಾತೆ ಹಾಗೂ ಪುಟ ನಿರ್ವಹಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಸುವ್ಯವಸ್ಥೆ ಹದಗೆಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.