ಬೆಳ್ತಂಗಡಿ :ನೆರಿಯಾ ಗ್ರಾಮದ ಕೊಲ್ನ ನದಿ ಕಿನಾರೆಯಲ್ಲಿ ದುಷ್ಕರ್ಮಿಗಳು ಮೀನು ಹಿಡಿಯಲು ನದಿಗೆ ವಿಷ ಪದಾರ್ಥ ಬೆರೆಸಿದ್ದರಿಂದ ಸಾವಿರಾರು ಮೀನುಗಳ ಮಾರಣ ಹೋಮ ನಡೆದಿದೆ. ಸ್ಥಳೀಯರು ಹೇಳುವಂತೆ ಸೋಮವಾರ ರಾತ್ರಿ 5 ಕೆಜಿಗೂ ಅಧಿಕ ಅಡಕೆ ತೋಟಕ್ಕೆ ಬಳಸುವ ಮೈಲುಸುತ್ತು ದ್ರಾವಣ ಬಳಸಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಸುಮಾರು 2 ಕಿ.ಮೀ. ದೂರ ಮೀನುಗಳು ಸಾವನ್ನಪ್ಪಿವೆ.
ನದಿಗೆ ವಿಷ ಬೆರೆಸಿದ ದುಷ್ಕರ್ಮಿಗಳು.. ನವಿಲು ಸೇರಿ ಸಾವಿರಾರು ಮೀನುಗಳ ಮಾರಣ ಹೋಮ.. - ನೆರಿಯಾ ಗ್ರಾಮದ ಕೊಲ್ನ ನದಿ
ಇದೇ ನೀರನ್ನು ಕುಡಿದು ನವಿಲು ಸಾವನ್ನಪ್ಪಿವೆ. ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರೊನಾ ಭೀತಿಯಿಂದ ನಲುಗಿರುವ ನಡುವೆಯೇ ಮನೆಯಿಂದ ಹೊರಗೆ ಬರಲಾಗದ ಕೆಲವರು ನದಿಗೆ ವಿಷ ಪದಾರ್ಥ ಹಾಕಿ ಮೀನು ಹಿಡಿಯಲು ಮುಂದಾಗುವ ಮೂಲಕ ಅಮಾನುಷ ವರ್ತನೆ ತೋರಿದ್ದಾರೆ.
![ನದಿಗೆ ವಿಷ ಬೆರೆಸಿದ ದುಷ್ಕರ್ಮಿಗಳು.. ನವಿಲು ಸೇರಿ ಸಾವಿರಾರು ಮೀನುಗಳ ಮಾರಣ ಹೋಮ.. manglore](https://etvbharatimages.akamaized.net/etvbharat/prod-images/768-512-6615556-548-6615556-1585715948036.jpg)
ಇದೇ ನೀರನ್ನು ಕುಡಿದು ನವಿಲು ಸಾವನ್ನಪ್ಪಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರೊನಾ ಭೀತಿಯಿಂದ ನಲುಗಿರುವ ನಡುವೆಯೇ ಮನೆಯಿಂದ ಹೊರಗೆ ಬರಲಾಗದ ಕೆಲವರು ನದಿಗೆ ವಿಷ ಪದಾರ್ಥ ಹಾಕಿ ಮೀನು ಹಿಡಿಯಲು ಮುಂದಾಗುವ ಮೂಲಕ ಅಮಾನುಷ ವರ್ತನೆ ತೋರಿದ್ದಾರೆ.
ಕೊಲ್ನ ನದಿಯಲ್ಲಿ ಹೊರ ಪ್ರದೇಶದಿಂದ ಬಂದ ಕೆಲವರು ವಿದ್ಯುತ್ ಇನ್‌ವರ್ಟರ್ ಬಳಸಿ ಮೀನು ಹಿಡಿಯುತ್ತಿರುವ ಆರೋಪವೂ ಕೇಳಿ ಬಂದಿದೆ. ಅದೇ ರೀತಿ ಅಣಿಯೂರು, ಪಿಲಿಕೊಳ, ನೆರಿಯಾ ಉಂಬಾಜೆ ಹಾೂ ಸುತ್ತಮುತ್ತಲಿನ ಸಾರ್ವಜನಿಕರು ಇದೇ ನೀರನ್ನು ಅವಲಂಬಿಸಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಆರೋಪಿಗಳ ಪತ್ತೆ ಹಚ್ಚುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.