ಕರ್ನಾಟಕ

karnataka

ETV Bharat / state

ಪ್ಲಾಸ್ಮಾ ದಾನ ಮಾಡಿದ ಮಂಗಳೂರಿನ ಮೂವರು ಪೊಲೀಸ್‌ ಕಾನ್ಸ್‌ಟೇಬಲ್‌ಗಳು - ಪ್ಲಾಸ್ಮಾ ದಾನ ಮಾಡಿದ ಪೊಲೀಸ್​ ಸಿಬ್ಬಂದಿ

ನಗರದ ಜಸ್ಟೀಸ್ ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಎರಡು ದಿನಗಳ ಹಿಂದೆ ಪ್ಲಾಸ್ಮಾ ಸಂಗ್ರಹಣಾ ಕೇಂದ್ರ ಆರಂಭವಾಗಿದೆ. ಇದು ಜಿಲ್ಲೆಯ ಮೊದಲ ಪ್ಲಾಸ್ಮಾ ಸಂಗ್ರಹಣಾ ಕೇಂದ್ರ. ಅದು ಆರಂಭವಾದ ಕೂಡಲೇ ಈ ಪೊಲೀಸರು ಪ್ಲಾಸ್ಮಾ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ..

Plasma donation from police staff in Mangaluru
ಪ್ಲಾಸ್ಮಾ ದಾನ

By

Published : Sep 11, 2020, 7:02 PM IST

ಮಂಗಳೂರು :ಕೊರೊನಾ ಸೋಂಕಿನಿಂದ ಗುಣಮುಖರಾದ ಮಂಗಳೂರಿನ ಮೂವರು ಪೊಲೀಸ್‌ ಕಾನ್ಸ್‌ಟೇಬಲ್‌ಗಳು ಪ್ಲಾಸ್ಮಾ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪ್ಲಾಸ್ಮಾ ದಾನ ಮಾಡಿದ ಪೊಲೀಸ್​ ಸಿಬ್ಬಂದಿ

ವೈದ್ಯರ ಸಲಹೆ ಮೇರೆಗೆ ಕೆಲ ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಪ್ಲಾಸ್ಮಾ ಚಿಕಿತ್ಸೆಗೆ ಒಳಗಾಗಬೇಕಾದ ರೋಗಿಗೆ ಅಗತ್ಯ ಪ್ಲಾಸ್ಮಾ ದೊರೆಯುವುದು ಕಷ್ಟಕರ. ಕೊರೊನಾದಿಂದ ಗುಣಮುಖರಾದವರಿಂದ ಪ್ಲಾಸ್ಮಾ ಪಡೆದು ಈ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ಮಂದಿ ಪ್ಲಾಸ್ಮಾ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಮಂಗಳೂರಿನ ಮೂವರು ಪೊಲೀಸ್ ಸಿಬ್ಬಂದಿ ಕೊರೊನಾದಿಂದ ಗುಣಮುಖರಾದ ಬಳಿಕ ಪ್ಲಾಸ್ಮಾ ದಾನ ಮಾಡಿದ್ದಾರೆ.

ಪ್ಲಾಸ್ಮಾ ದಾನ ಮಾಡಿದ ಪೊಲೀಸ್​ ಸಿಬ್ಬಂದಿ

ಡಿಎಆರ್​ ಹೆಡ್​​ಕಾನ್ಸ್​ಟೇಬಲ್​ ರಂಜಿತ್ ರೈ, ಸಿಸಿಬಿ ಹೆಡ್​​ಕಾನ್ಸ್​ಟೇಬಲ್​​ಗಳಾದ ಸುಧೀರ್‌ ಕುಮಾರ್ ಹಾಗೂ ಮಣಿ ಎಂಬುವರು ಪ್ಲಾಸ್ಮಾ ದಾನ ಮಾಡಿದವರು. ನಗರದ ಜಸ್ಟೀಸ್ ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಎರಡು ದಿನಗಳ ಹಿಂದೆ ಪ್ಲಾಸ್ಮಾ ಸಂಗ್ರಹಣಾ ಕೇಂದ್ರ ಆರಂಭವಾಗಿದೆ. ಇದು ಜಿಲ್ಲೆಯ ಮೊದಲ ಪ್ಲಾಸ್ಮಾ ಸಂಗ್ರಹಣಾ ಕೇಂದ್ರ. ಅದು ಆರಂಭವಾದ ಕೂಡಲೇ ಈ ಪೊಲೀಸರು ಪ್ಲಾಸ್ಮಾ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪ್ಲಾಸ್ಮಾ ದಾನ ಮಾಡಿದ ಪೊಲೀಸ್​ ಸಿಬ್ಬಂದಿ

ABOUT THE AUTHOR

...view details