ಉಳ್ಳಾಲ (ದಕ್ಷಿಣ ಕನ್ನಡ): ವಿವಿಧ ಸಂಘ ಸಂಸ್ಥೆಗಳು ಹಸರೀಕರಣ ಯೋಜನೆಯಲ್ಲಿ ಕೈಜೋಡಿಸಿದಲ್ಲಿ ಮಾಲಿನ್ಯಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ರಿಫಾಯಿ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್ ಅಭಿಪ್ರಾಯಪಟ್ಟರು.
ಪರಿಸರ ಸಮತೋಲನಕ್ಕೆ ಗಿಡ ನೆಡಿ; ಇಬ್ರಾಹಿಂ ಕೋಡಿಜಾಲ್ - Dakshina Kannada District News
ವಿವಿಧ ಸಂಘ ಸಂಸ್ಥೆಗಳು ಹಸರೀಕರಣ ಯೋಜನೆಯಲ್ಲಿ ಕೈಜೋಡಿಸಿದಲ್ಲಿ ಮೂಲಕ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ರಿಫಾಯಿ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್ ಅಭಿಪ್ರಾಯಪಟ್ಟರು.
ಕೊಣಾಜೆ ರಿಫಾಯಿ ಜುಮಾ ಮಸ್ಜಿದ್ ಕೋಡಿಜಾಲ್ ಆವರಣದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಸಿರು ಕ್ರಾಂತಿಗೆ ಪೂರಕವಾಗಿ ಖಾಲಿ ಸ್ಥಳಗಳಲ್ಲಿ ಮರಗಳನ್ನು ನೆಟ್ಟು ಪರಿಸರದ ಸಮತೋಲನಕ್ಕೆ ಕಾರ್ಯನಿರ್ವಹಿಸುವ ಕಾರ್ಯ ಆಗಬೇಕಾಗಿದೆ ಎಂದರು.
ಪ್ರಾಧ್ಯಾಪಕ ಹಾಗೂ ಹಸಿರು ಸೇನೆಯ ಸಂಯೋಜಕ ಡಾ. ನವೀನ್ ಎನ್. ಕೊಣಾಜೆ ಮಾತನಾಡಿ, ಮಸೀದಿ ಪರಿಸರದಲ್ಲಿ 150 ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು. ಡಾ. ದಯಾನಂದ ಪೈ, ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಸಿರು ಸೇನೆ, ಖಿದ್ಮತ್ತುಲ್ ಇಸ್ಲಾಂ ಎಸೋಸಿಯೇಷನ್ ಕೋಡಿಜಾಲ್, ಮಾಧ್ಯಮ ಕೇಂದ್ರ ಉಳ್ಳಾಲ ಮತ್ತು ರೂಟ್ಸ್ ಇಂಡಿಯಾ ಜಂಟಿ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಿತು.