ಕರ್ನಾಟಕ

karnataka

ಪಂಪ್​​ವೆಲ್​ನಲ್ಲಿ 'ಸ್ಮಾರ್ಟ್' ಬಸ್ ನಿಲ್ದಾಣ ನಿರ್ಮಾಣಕ್ಕೆ ಯೋಜನೆ: 445 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ

By

Published : Oct 20, 2019, 9:40 AM IST

ಮಂಗಳೂರಿನಲ್ಲಿ 7.50 ಎಕರೆ ಸ್ಥಳದಲ್ಲಿ 445 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಮಾದರಿಯಲ್ಲಿ‌ ಬಸ್ ನಿಲ್ದಾಣ ನಿರ್ಮಾಣವಾಗಲಿದೆ.

ಸ್ಮಾರ್ಟ್ ಸಿಟಿ ಸಲಹಾ ವೇದಿಕೆ ಸಭೆ

ಮಂಗಳೂರು:ನಗರದ ಸ್ಟೇಟ್ ಬ್ಯಾಂಕ್ ಬಳಿ ಇರುವ ಬಸ್ ನಿಲ್ದಾಣ ಪಂಪ್​ವೆಲ್​ಗೆ ಸ್ಥಳಾಂತರಗೊಳ್ಳಲಿದ್ದು, 7.50 ಎಕರೆ ಸ್ಥಳದಲ್ಲಿ 445 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಮಾದರಿಯಲ್ಲಿ‌ ನಿರ್ಮಾಣವಾಗಲಿದೆ. ಈ ಹಿನ್ನೆಲೆಯಲ್ಲಿ ಎ.ಬಿ.ಶೆಟ್ಟಿ ಸರ್ಕಲ್​ನಿಂದ ಕ್ಲಾಕ್ ಟವರ್​​ವರೆಗಿನ ರಸ್ತೆಯನ್ನು ಏಕಮುಖ ಸಂಚಾರ ಮಾಡಲಾಗುದಿಲ್ಲ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ನಜೀರ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸ್ಮಾರ್ಟ್ ಸಿಟಿ ಸಲಹಾ ವೇದಿಕೆ ಸಭೆಯಲ್ಲಿ ಅವರು ಜಿಲ್ಲಾಧಿಕಾರಿಗೆ ಈ ಬಗ್ಗೆ ವಿವರಣೆ ನೀಡಿ, ಹಳೆಯ ಬಸ್ ನಿಲ್ದಾಣದಲ್ಲಿ ಸುಸಜ್ಜಿತವಾಗಿ ಸಿಟಿ ಬಸ್​​ಗಳ ನಿಲ್ದಾಣ ವ್ಯವಸ್ಥೆ ಆಗಲಿದೆ ಎಂದು ಹೇಳಿದರು. ಅಲ್ಲದೆ ಸ್ಮಾರ್ಟ್ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಲೇಡಿಗೋಷನ್ ಆಸ್ಪತ್ರೆಗೆ 5 ಕೋಟಿ ರೂ. ಹಾಗೂ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ 45 ಕೋಟಿ ರೂ. ಅನುದಾನ ಬರಲಿದೆ. ಇನ್ನು ಲೇಡಿಗೋಷನ್​ನ ನೂತನ ಅಂತಸ್ತು ನಿರ್ಮಾಣಕ್ಕೆ ಈ ಅನುದಾನ ಬಳಕೆಯಾಗುತ್ತದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ನಗರದ ಪುರಭವನದ ಮುಂಭಾಗ ಸ್ಮಾರ್ಟ್ ಮಾದರಿಯ ಅಂಡರ್ ಪಾಸ್​ಗೆ ಕಾಮಗಾರಿ ಆರಂಭವಾಗಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ರಸ್ತೆಯಲ್ಲಿರುವ ಮಿನಿ ವಿಧಾನಸೌಧದ ಮುಂಭಾಗದಿಂದ ಅಂಡರ್ ಪಾಸ್ ಆರಂಭಗೊಂಡು ಪುರಭವನದ ಎಡಭಾಗದ ರಸ್ತೆಯ ಅಂಚಿನಲ್ಲಿರುವ ಹಳೆಯ ತಾಜ್ ಮಹಲ್ ಹೋಟೆಲ್​ವರೆಗೆ ಇರಲಿದೆ. ಈಗಾಗಲೇ ಈ ಕಾಮಗಾರಿ ಆರಂಭಗೊಂಡಿದ್ದು, ಸುಮಾರು ಆರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ‌.

ABOUT THE AUTHOR

...view details