ಮಂಗಳೂರು: ಮಹಾಮಾರಿ ಕೊರೊನಾ ಕಾರಣದಿಂದ ಮುಚ್ಚಲ್ಪಟ್ಟಿದ್ದ ಪಿಲಿಕುಳ ಮೃಗಾಲಯ ಆ.16 ರಿಂದ ಮತ್ತೆ ತೆರೆಯಲಿದೆ.
ಆ.16 ರಿಂದ ಪಿಲಿಕುಳ ಮೃಗಾಲಯ ಓಪನ್ - Mangalore latest news
ಲಾಕ್ ಡೌನ್ ವೇಳೆ ಮುಚ್ಚಲ್ಪಟ್ಟಿದ್ದ ಪಿಲಿಕುಳ ಮೃಗಾಲಯವು ಲಾಕ್ ಡೌನ್ ಮುಗಿದ ಬಳಿಕ ಆರಂಭವಾಗಿತ್ತು. ಆದರೆ ಆರಂಭವಾದ ಕೆಲವೇ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಿದ್ದ ಕಾರಣ ಮುಚ್ಚಲ್ಪಟ್ಟಿತ್ತು. ಇದೀಗ ಮತ್ತೆ ಮೃಗಾಲಯ ತೆರೆಯಲು ನಿರ್ಧರಿಸಲಾಗಿದೆ.
![ಆ.16 ರಿಂದ ಪಿಲಿಕುಳ ಮೃಗಾಲಯ ಓಪನ್ Pilikula zoo](https://etvbharatimages.akamaized.net/etvbharat/prod-images/768-512-kn-mng-02-pilikula-photo-7202146-14082020184031-1408f-1597410631-462.jpg)
Pilikula zoo
ಕೊರೊನಾ ಹಿನ್ನೆಲೆ ಘೋಷಣೆಯಾದ ಲಾಕ್ಡೌನ್ ವೇಳೆ ಮುಚ್ಚಲ್ಪಟ್ಟಿದ್ದ ಪಿಲಿಕುಳ ಮೃಗಾಲಯವು ಲಾಕ್ ಡೌನ್ ಮುಗಿದ ಬಳಿಕ ಆರಂಭವಾಗಿತ್ತು. ಆದರೆ ಆರಂಭವಾದ ಕೆಲವೇ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಿದ್ದ ಕಾರಣ ಮುಚ್ಚಲ್ಪಟ್ಟಿತ್ತು. ಇದೀಗ ಮತ್ತೆ ಮೃಗಾಲಯ ತೆರೆಯಲು ನಿರ್ಧರಿಸಲಾಗಿದೆ.
ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುವುದು, ಕೈಗಳನ್ನು ಸ್ಯಾನಿಟೈಸ್ ಮಾಡಲಾಗುವುದು. ಮೃಗಾಲಯದಲ್ಲಿ 76 ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಟಿಕೆಟ್ ಅನ್ನು ಪ್ರವೇಶದ್ವಾರದ ಬಾಕ್ಸ್ ಆಫೀಸ್‌ನಲ್ಲಿ ನೀಡಲಾಗುವುದು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್ ಜೆ ಭಂಡಾರಿ ತಿಳಿಸಿದ್ದಾರೆ.