ಮಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪ್ರವಾಸಿಗರ ಭೇಟಿ ಕಡಿಮೆ ಇರುವುದರಿಂದ ಪಿಲಿಕುಳ ನಿಸರ್ಗಧಾಮವನ್ನು ಜು.4 ರಿಂದ ಮುಚ್ಚಲು ನಿರ್ಧರಿಸಲಾಗಿದೆ.
ಪ್ರವಾಸಿಗರ ಕೊರತೆ: ಜು. 4 ರಿಂದ 31 ವರೆಗೆ ಪಿಲಿಕುಳ ಬಂದ್ - Mangalore latest news
ಪ್ರವಾಸಿಗರು ಕಡಿಮೆ ಪ್ರಮಾಣದಲ್ಲಿ ಪಿಲಿಕುಳಕ್ಕೆ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಜುಲೈ.04 ರಿಂದ ಜುಲೈ.31ರವರೆಗೆ ತಾತ್ಕಾಲಿಕವಾಗಿ ನಿಸರ್ಗಧಾಮವನ್ನು ಮುಚ್ಚಲಾಗುತ್ತಿದೆ.
Pilikula
ಲಾಕ್ ಡೌನ್ ತೆರವುಗೊಳಿಸಿದ ಬಳಿಕ ಪಿಲಿಕುಳ ನಿಸರ್ಗಧಾಮವನ್ನು ತೆರೆಯಲಾಗಿತ್ತು. ಆದರೆ ಕೊರೊನಾ, ಹಾಗೂ ಮಳೆಗಾಲದ ಕಾರಣದಿಂದ ಇಲ್ಲಿಗೆ ಬರುವ ಪ್ರವಾಸಿಗಳ ಸಂಖ್ಯೆಯಲ್ಲಿ ಇಳಿಮುಖವಾದ ಹಿನ್ನೆಲೆಯಲ್ಲಿ ನಿಸರ್ಗಧಾಮ ಮುಚ್ಚಲು ನಿರ್ಧರಿಸಲಾಗಿದೆ.
ಜುಲೈ.04 ರಿಂದ ಜುಲೈ.31ರವರೆಗೆ ಪಿಲಿಕುಳವನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತಿದ್ದು, ಈ ಅವಧಿಯಲ್ಲಿ ಸಂದರ್ಶಕರ ಭೇಟಿಗೆ ಅವಕಾಶವಿರುವುದಿಲ್ಲ ಎಂದು ಪಿಲಿಕುಳ ನಿಸರ್ಗಧಾಮ ಪ್ರಕಟಣೆಯಲ್ಲಿ ತಿಳಿಸಿದೆ.