ಮಂಗಳೂರು:ಅಶ್ವತ್ಥ ಎಲೆಗಳಲ್ಲಿ ಚಿತ್ರ ಬಿಡಿಸುವ ಮೂಲಕ ರಾಜ್ಯದಲ್ಲೇ ಪ್ರಸಿದ್ಧಿ ಪಡೆದ ಕರಾವಳಿಯ ಯುವಕ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಚಿತ್ರ ಬಿಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅರಳಿ ಮರದ ಎಲೆಯಲ್ಲಿ ಅರಳಿದ ಬಿಜೆಪಿ ರಾಜ್ಯಾಧ್ಯಕ್ಷರ ಚಿತ್ರ: ಯುವಕನ ಕೈಚಳಕಕ್ಕೆ ಕಟೀಲ್ ಫಿದಾ - ಅಶ್ವತ್ಥ ಎಲೆ
ಅಶ್ವತ್ಥ ಎಲೆಗಳನ್ನು ಬಳಸಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಚಿತ್ರವನ್ನು ಕಲ್ಲಬೆಟ್ಟು ಅಕ್ಷಯ್ ಕೋಟ್ಯಾನ್ ಬಿಡಿಸಿದ್ದು, ಈ ಚಿತ್ರವನ್ನು ಸ್ವೀಕರಿಸಿದ ಕಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಅಶ್ವತ್ಥ ಎಲೆಯಲ್ಲಿ ಮೂಡಿದ ಬಿಜೆಪಿ ರಾಜ್ಯಾಧ್ಯಕ್ಷರ ಚಿತ್ರ
ಮೂಡುಬಿದಿರೆಯ ಕಲ್ಲಬೆಟ್ಟು ಅಕ್ಷಯ್ ಕೋಟ್ಯಾನ್ ಅಶ್ವತ್ಥ ಎಲೆಯಲ್ಲಿ ಚಿತ್ರ ಬಿಡಿಸಿರುವ ಪ್ರತಿಭಾವಂತ ಕಲಾವಿದ. ಈ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಚಿತ್ರವನ್ನು ಅಶ್ವತ್ಥ ಎಲೆಯಲ್ಲಿ ಬಿಡಿಸಿ ಮುಖ್ಯಮಂತ್ರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದು, ಇದೀಗ ಬಿಜೆಪಿ ರಾಜ್ಯಧ್ಯಕ್ಷರ ಸಂತಸಕ್ಕೆ ಕಾರಣರಾಗಿದ್ದಾರೆ.
ತಮ್ಮ ಕೈಯಲ್ಲಿ ಮೂಡಿಬಂದ ಚಿತ್ರವನ್ನು ಇಂದು ಮಂಗಳೂರಿನಲ್ಲಿ ಸಂಸದರಿಗೆ ಅಕ್ಷಯ್ ನೀಡಿದ್ದು, ಇದನ್ನು ಕಂಡು ಸಂತಸಗೊಂಡ ನಳಿನ್ ಕುಮಾರ್ ಕಟೀಲ್, ಅಕ್ಷಯ್ಗೆ ಶಾಲು ಹೊದಿಸಿ ಅಭಿನಂದಿಸಿದರು.