ಕರ್ನಾಟಕ

karnataka

ETV Bharat / state

ಬೈಕ್​​​ಗೆ ಪಿಕಪ್ ವಾಹನ ಡಿಕ್ಕಿ: ಇಬ್ಬರು ಸವಾರರು ಸ್ಥಳದಲ್ಲೇ ಸಾವು - ಬೈಕ್​​ ಸವಾರರು ಸಾವು

ಬೈಕ್​​​​ಗೆ ಪಿಕಪ್​ ವಾಹನ ಡಿಕ್ಕಿಯಾಗಿ ಸವಾರರಿಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಅಪಘಾತ ಎಸಗಿದ ಚಾಲಕ ಪಿಕಪ್ ವಾಹನ ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದು, ಬಳಿಕ ಕೆಲವೇ ಕ್ಷಣದಲ್ಲಿ ಪೊಲೀಸರು ಪಿಕಪ್ ವಾಹನವನ್ನು ಪತ್ತೆ ಮಾಡುವಲ್ಲಿಯೂ ಯಶಸ್ವಿಯಾಗಿದ್ದಾರೆ.

Pickup vehicle collision with Bike: Riders died in Spot
ಬೈಕ್​​​ಗೆ ಪಿಕಪ್ ವಾಹನ ಡಿಕ್ಕಿ:

By

Published : Nov 30, 2020, 8:42 AM IST

Updated : Nov 30, 2020, 2:26 PM IST

ಬೆಳ್ತಂಗಡಿ (ದ.ಕ): ಇಲ್ಲಿನ ಕುಪ್ಪೆಟ್ಟಿ ಸಮೀಪದ ಹುಣ್ಸೆಕಟ್ಟೆ ಬಳಿ ಪಿಕಪ್ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಉರುವಾಲು ನಿವಾಸಿ ಕೃಷ್ಣಪ್ರಸಾದ್ ಶೆಟ್ಟಿ (36) ಹಾಗೂ ಕಣಿಯೂರಿನ ಜಯರಾಮ ಗೌಡ (28) ಮೃತ ದುರ್ದೈವಿಗಳು.

ನ. 29ರ ರಾತ್ರಿ ಬೈಕ್​​​​​ನಲ್ಲಿ ತೆರಳುತ್ತಿರುವಾಗ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಮೃತರು ಕಲ್ಲೇರಿಯಿಂದ ಉರುವಾಲು ಕಡೆಗೆ ತೆರಳುತ್ತಿದ್ದರು. ಘಟನೆ ನಡೆದ ಸ್ಥಳದ ಅಸುಪಾಸಿನ‌ ಮನೆಯವರು ಶಬ್ದ ಕೇಳಿ ಓಡಿ ಬಂದು ನೋಡಿದಾಗ ಪಿಕಪ್ ಚಾಲಕ ವಾಹನ ನಿಲ್ಲಿಸದೇ ಹೋಗಿರುವುದು ತಿಳಿದಿದೆ.

ಆರೋಪಿ ಕೊಯ್ಯೂರು ಗ್ರಾಮದ ಚಾಲಕ ಹರೀಶ(29) ಎಂಬುವನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತ ಅಮಲೇರುವ ಪದಾರ್ಥ ತೆಗೆದುಕೊಂಡಿರುವುದು ಬೆಳಕಿಗೆ ಬಂದಿದೆ. ಅಮಲು ಪದಾರ್ಥದ ನಶೆಯಲ್ಲಿ ವಾಹನ ಚಾಲನೆ ಮಾಡಿ, ಇನ್ನೊಂದು ಜೀವಕ್ಕೆ ಹಾನಿ ಅಥವಾ ಮರಣ ಉಂಟಾಗಬಹುದು ಎಂಬ ಜ್ಞಾನವಿದ್ದರೂ, ನಶೆಯಲ್ಲಿ ವಾಹನ ಚಲಾಯಿಸಿ ಕೃತ್ಯವೆಸಗಿರುವುದರಿಂದ ಜೀವಾವಧಿ ಶಿಕ್ಷೆ ಅಥವಾ ಹತ್ತು ವರ್ಷಗಳವರೆಗೆ ಶಿಕ್ಷೆ ವಿಸ್ತರಿಸಬಹುದಾದ ಕೊಲೆಯಲ್ಲದ ಅಪರಾಧಿಕ ನರಹತ್ಯೆ ಪ್ರಕರಣ ದಾಖಲಿಸಲಾಗಿದೆ.

Last Updated : Nov 30, 2020, 2:26 PM IST

ABOUT THE AUTHOR

...view details