ಕರ್ನಾಟಕ

karnataka

'ನಿರ್ವಾಹಕ ಟಿಕೆಟ್‌ ಕೊಡದಿದ್ದರೆ ಫ್ರೀಯಾಗಿ ಪ್ರಯಾಣಿಸಿ, ಕಿರಿ ಕಿರಿ ಮಾಡಿದ್ರೆ...' ಆಯುಕ್ತರು ಹೇಳಿದ್ದೇನು?

By

Published : Oct 4, 2019, 7:28 PM IST

ಬಸ್ ನಿರ್ವಾಹಕರು ಟಿಕೆಟ್ ನೀಡದೇ ಪ್ರಯಾಣ ದರ ಪಡೆದಲ್ಲಿ ಉಚಿತವಾಗಿ ಪ್ರಯಾಣಿಸಿ. ಹಣ ನೀಡುವಂತೆ ನಿರ್ವಾಹಕ ಕಿರಿಕಿರಿ ಮಾಡಿದಲ್ಲಿ ಬಸ್ ಮಾಲೀಕರ ಸಂಘದ ಅಧ್ಯಕ್ಷರ ವ್ಯಾಟ್ಸ್ ಆ್ಯಪ್ ಸಂಖ್ಯೆಗೆ ಬಸ್ ಸಂಖ್ಯೆ ಸಹಿತ ದೂರು ನೀಡಿ ಎಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ

ಮಂಗಳೂರು: ಬಸ್ ನಿರ್ವಾಹಕರು ಟಿಕೆಟ್ ನೀಡದೇ ಪ್ರಯಾಣ ದರ ಪಡೆದಲ್ಲಿ ಉಚಿತವಾಗಿ ಪ್ರಯಾಣಿಸಿ. ಹಣ ನೀಡುವಂತೆ ನಿರ್ವಾಹಕ ಕಿರಿಕಿರಿ ಮಾಡಿದಲ್ಲಿ ಬಸ್ ಮಾಲೀಕರ ಸಂಘದ ಅಧ್ಯಕ್ಷರ ವ್ಯಾಟ್ಸ್ ಆ್ಯಪ್ ಸಂಖ್ಯೆಗೆ ಬಸ್ ಸಂಖ್ಯೆ ಸಹಿತ ದೂರು ನೀಡಿ ಎಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸ್ ನಿರ್ವಾಹಕರು ಟಿಕೆಟ್ ನೀಡದೆ ಪ್ರಯಾಣ ದರ ಪಡೆಯುವಂತಿಲ್ಲ. ಈ ಬಗ್ಗೆ ಸಾಕಷ್ಟು ದೂರು ಬರುತ್ತಲೇ ಇವೆ. ಆದರೆ ಪರಿಸ್ಥಿತಿ ಸುಧಾರಿಸಿಲ್ಲ. ಪ್ರಯಾಣಿಕರು ಪ್ರಯಾಣ ದರ ನೀಡುವಾಗ ಟಿಕೆಟ್ ದರ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಈ ಸಂದರ್ಭ ಟಿಕೆಟ್ ನೀಡದೆ ನಿರ್ವಾಹಕ ಅಸಂಬದ್ಧವಾಗಿ ವ್ಯವಹರಿಸಿದರೆ 7996999977 ದೂರವಾಣಿ ಸಂಖ್ಯೆಗೆ ಬಸ್ ಸಂಖ್ಯೆ ಸಹಿತ ದೂರು ನೀಡಿ ಎಂದು ಪಿ.ಎಸ್.ಹರ್ಷ ಸೂಚನೆ ನೀಡಿದರು.

ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಫೋನ್​ಇನ್​ ಕಾರ್ಯಕ್ರಮ

ಚರ್ಚ್, ದೇವಸ್ಥಾನ, ಮಸೀದಿಗಳಲ್ಲಿ ವಿಶೇಷ ದಿನಗಳಲ್ಲಿ ವಾಹನ ನಿಯಂತ್ರಣ ಮಾಡಲು ಅವರದೇ ಸ್ವಯಂಸೇವಕರನ್ನು ನೇಮಿಸಬೇಕು. ಇವರು ಪೊಲೀಸರೊಂದಿಗೆ ಕೈಜೋಡಿಸಬೇಕು. ಅಲ್ಲದೆ ಟ್ರಾಫಿಕ್ ಪೊಲೀಸರಿಂದ ಅವರಿಗೆ ತರಬೇತಿಯನ್ನು ಒದಗಿಸಬೇಕು. ಕಾರ್ಯಕ್ರಮ ಮುಗಿದ ತಕ್ಷಣ ಸ್ವಯಂಸೇವಕರೇ ಪಾರ್ಕಿಂಗ್ ನಿಂದ ಎಲ್ಲಾ ವಾಹನಗಳನ್ನು ತೆರವುಗೊಳಿಸುವ ವ್ಯವಸ್ಥೆ ಮಾಡಬೇಕು. ಪೊಲೀಸರು ಈ ರೀತಿ ಮಾಡಿದಲ್ಲಿ ಧಾರ್ಮಿಕ ಭಾವನೆಗಳ ಪ್ರಶ್ನೆಗಳು ಉದ್ಭವವಾಗುತ್ತವೆ. ಅವರದೇ ಸದಸ್ಯರು ಸ್ಥಳದಲ್ಲಿ ವ್ಯವಸ್ಥೆ ಮಾಡಿದರೆ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ ಎಂದರು.

ನೂತನ‌ ವಾಹನ ಕಾಯ್ದೆಯ ಪ್ರಕಾರ ರಸ್ತೆಯ ಅವ್ಯವಸ್ಥೆ ಕಾಮಗಾರಿಯಿಂದ ಮೃತಪಟ್ಟರೆ ಅಥವಾ ಗಾಯಗೊಂಡರೆ, ಕಾಮಗಾರಿ ನಡೆಸುವವರ ಮೇಲೆ ಪ್ರಕರಣ ದಾಖಲಿಸಬಹುದು. ನ್ಯಾಯಾಲಯ ಈ ಬಗ್ಗೆ ಸೂಕ್ತವಾಗಿ ಪರಿಶೀಲನೆ ನಡೆಸಿ, ಒಂದು ಲಕ್ಷ ರೂ‌. ವರೆಗೆ ದಂಡ ವಿಧಿಸುವ ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಡಿಸಿಪಿಗಳಾದ ಅರುಣಾಂಗು ಗಿರಿ, ಲಕ್ಷ್ಮೀಗಣೇಶ್, ಎಸಿಪಿಗಳಾದ ಮಂಜುನಾಥ ಶೆಟ್ಟಿ, ವಿನಯ್ ಗಾಂವ್ಕರ್, ಟ್ರಾಫಿಕ್ ಇನ್ ಸ್ಪೆಕ್ಟರ್ ಗಳಾದ ಅಮಾನುಲ್ಲಾ, ಗುರು ಕಾಮತ್ ಮತ್ತಿತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details