ಮಂಗಳೂರು:ಸೈಡ್ ಬಿಡದ ಹಿನ್ನೆಲೆಯಲ್ಲಿ ಬಸ್ ಚಾಲಕನ ಮೇಲೆ ಬೈಕ್ ಸವಾರನೋರ್ವ ಪೆಟ್ರೋಲ್ ಎರಚಿ, ಕೊಲೆ ಮಾಡಲು ಯತ್ನಿಸಿರುವ ಘಟನೆ ಪಡೀಲ್ನಲ್ಲಿರುವ ಫೈಸಲ್ ನಗರದಲ್ಲಿ ನಡೆದಿದೆ.
ಬಸ್ ಚಾಲಕನ ಮೇಲೆ ಪೆಟ್ರೋಲ್ ಎರಚಿ, ಕೊಲೆ ಯತ್ನ: ಬೈಕ್ ಸವಾರನ ವಿರುದ್ಧ ದೂರು ದಾಖಲು - ಬಸ್ ಚಾಲಕನ ಮೇಲೆ ಬೈಕ್ ಸವಾರನೋರ್ವ ಪೆಟ್ರೋಲ್
ಬಸ್ ಚಾಲಕನೋರ್ವನ ಮೇಲೆ ಪೆಟ್ರೋಲ್ ಎರಚಿ ಕೊಲೆ ಮಾಡಲು ಯತ್ನ ನಡೆಸಿದ್ದಾಗಿ ತಿಳಿದು ಬಂದಿದ್ದು, ಪ್ರಕರಣ ದಾಖಲಾಗಿದೆ.
ರೂಟ್ ನಂಬರ್ 23ರಲ್ಲಿ ಸುವರ್ಣ ಬಸ್ ರಾತ್ರಿ 8.30 ಸುಮಾರಿಗೆ ಸ್ಟೇಟ್ ಬ್ಯಾಂಕ್ನಿಂದ ಫೈಸಲ್ ನಗರಕ್ಕೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಕೊನೆಯ ಸ್ಟಾಪ್ ತಲುಪುವ ಮೊದಲೇ ಬೈಕ್ನಲ್ಲಿ ಬಂದಿರುವ ಅಶ್ರಫ್ ಎಂಬಾತ ಸೈಡ್ ಕೊಡದ ವಿಚಾರದಲ್ಲಿ ಬಸ್ ಗಡ್ಡಗಟ್ಟಿ ತಗಾದೆ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದಿದ್ದು, ಚಾಲಕ ಸಂಪತ್ ಪೂಜಾರಿ ಬಸ್ನಿಂದ ಇಳಿದು ಮಾತಿಗೆ ನಿಂತಿದ್ದಾರೆ.
ಈ ಸಂದರ್ಭ ಬೈಕ್ ಸವಾರ ಅಶ್ರಫ್ ತನ್ನ ಕೈಯಲ್ಲಿ ಹಿಡಿದುಕೊಂಡಿದ್ದ ಬಾಟಲಿಯಲ್ಲಿರುವ ಪೆಟ್ರೋಲ್ ಎರಚಿದ್ದಾನೆ ಎಂದು ತಿಳಿದು ಬಂದಿದೆ. ಬಸ್ ಚಾಲಕ ಸಂಪತ್ ಪೂಜಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದಾರೆ. ವಿಷಯ ತಿಳಿದು ಅಲ್ಲಿನ ಜನ ಜಮಾಯಿಸಿ ಬೈಕ್ ಸವಾರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಅಶ್ರಫ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.