ಪುತ್ತೂರು(ದಕ್ಷಿಣ ಕನ್ನಡ):ಹಾಡಹಗಲೇ ಅಪ್ರಾಪ್ತೆಗೆ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣ ಪುತ್ತೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆದಿದೆ. ದೂರಿನ ಹಿನ್ನೆಲೆಯಲ್ಲಿ ಬಸ್ ನಿಲ್ದಾಣಕ್ಕೆ ಬಂದ ಪೊಲೀಸರು ಆರೋಪಿ ಸರಳೀಕಟ್ಟೆ ನಿವಾಸಿ ನೌಫಲ್ (28) ಎಂಬಾತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
ಗದಗ ಮೂಲದ ಬಾಲಕಿಗೆ ಬಸ್ ನಿಲ್ದಾಣದ ಬಳಿ ಇದ್ದ ಸಂದರ್ಭದಲ್ಲಿ ಆರೋಪಿ ನೌಫಲ್ ಆಕೆಯ ಬಳಿ ಬಂದು 10 ನಿಮಿಷ ನನ್ನ ಜೊತೆ ಬರುತ್ತೀಯಾ, ನಾನು ನಿನಗೆ ಹಣ ಕೊಡುತ್ತೇನೆ ಎಂದು ಅಮಿಷವೊಡ್ಡಿ ತನ್ನ ಜೊತೆ ಬರುವಂತೆ ಒತ್ತಾಯಿಸಿದ್ದಾನೆ ಎನ್ನಲಾಗ್ತಿದೆ.