ಕರ್ನಾಟಕ

karnataka

ETV Bharat / state

ಬ್ಯಾಂಕಿಗೆ ವಂಚನೆ: ದೂರು ಪರಿಶೀಲಿಸುವಾಗ ಬಯಲಾಯಿತು ಆರೋಪಿಯ ಖತರ್ನಾಕ್ ಐಡಿಯಾ - person Cheating to bank manglore

ಎಟಿಎಂನಿಂದ ಹಣ ವಿತ್​​ಡ್ರಾ ಸಮಯ ಹಣ ಬಂದಿರಲಿಲ್ಲ ಎಂಬ ಕಾರಣದಿಂದ ಆನ್ಲೈನ್ ಕ್ಲೈಮ್ ಬಗ್ಗೆ ಅರ್ಜಿಗಳು ಬಂದಿದ್ದು, ಇದರ ಪರಿಶೀಲನೆ ವೇಳೆ ವ್ಯಕ್ತಿವೋರ್ವ ಎಟಿಎಂನಿಂದ 2 ಲಕ್ಷದ 24 ಸಾವಿರ ಹಣವನ್ನು ಪಡೆದು ಬ್ಯಾಂಕಿಗೆ ಮೋಸ ಮಾಡಿದ್ದು ಕಂಡುಬಂದಿದೆ. ಈ ಸಂಬಂಧ ಆತನ ವಿರುದ್ಧ ಬ್ಯಾಂಕ್ ಮ್ಯಾನೇಜರ್ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

manglore
ಪೊಲೀಸ್​​ ಆಯುಕ್ತರ ಕಛೇರಿ

By

Published : Feb 4, 2021, 7:26 AM IST

ಮಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್​ಬಿಐ)ದ ಮಂಗಳೂರು ಪೋರ್ಟ್ ರೋಡ್ ಶಾಖೆಗೆ ಸೇರಿದ ವಿವಿಧ ಎಟಿಎಂಗಳಲ್ಲಿ ಹಣ ಬಂದಿಲ್ಲ ಎಂಬ ಕಾರಣ ನೀಡಿ ಆನ್ಲೈನ್ ಕ್ಲೈಮ್​ಗೆ ಬಂದ ಅರ್ಜಿ ಪರಿಶೀಲನೆ ವೇಳೆ ಆರೋಪಿಯ ಖತರ್ನಾಕ್ ಐಡಿಯಾ ಬೆಳಕಿಗೆ ಬಂದಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ಯಾಂಕಿಗೆ ಸಂಬಂಧಪಟ್ಟ ಮೋರ್ಗನ್ಸ್ ಗೇಟ್, ಮಂಗಳಾದೇವಿ, ಕೊಟ್ಟಾರ್​, ಬಂಟ್ಸ್ ಹಾಸ್ಟೆಲ್, ಕಾರ್ ಸ್ಟ್ರೀಟ್, ಲಾಲ್ ಬಾಗ್, ಎಂಪೈರ್ ಮಾಲ್ ಕಡೆಗಳಲ್ಲಿರುವ ಎಟಿಎಂನಿಂದ ಹಣ ವಿತ್​ಡ್ರಾ ಸಮಯ ಹಣ ಬಂದಿರಲಿಲ್ಲ ಎಂಬ ಕಾರಣದಿಂದ ಆನ್ಲೈನ್ ಕ್ಲೈಮ್ ಬಗ್ಗೆ ಅರ್ಜಿಗಳು ಬಂದಿತ್ತು.

ಈ ಹಿನ್ನೆಲೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಅವರು ಬ್ಯಾಂಕಿನ ಎಟಿಎಂಗಳ ಸಿಸಿಟಿವಿ ಪರಿಶೀಲನೆ ಮಾಡಿದಾಗ ಓರ್ವ ವ್ಯಕ್ತಿ ಜನವರಿ 17 ಮತ್ತು ಜನವರಿ 18 ರಂದು ಎಟಿಎಂಗಳಲ್ಲಿ ಹಣ ವಿತ್​ಡ್ರಾ ಮಾಡಿ ಹಣವನ್ನು ಸ್ವೀಕರಿಸುವುದು ಕಂಡುಬಂದಿದೆ. ಆದರೆ ಎಟಿಎಂನಿಂದ ಹಣ ಸ್ವೀಕರಿಸಿದ ವ್ಯಕ್ತಿಯು ಹಣ ಮಷಿನ್​ನಿಂದ ಬರುವ ಸಮಯ ಯಾವುದೋ ಅನಧಿಕೃತ ವಸ್ತುವನ್ನು ಕ್ಯಾಶ್ ಡಿಸ್ಪೆನ್ಸರಿಗೆ ಹಾಕಿ ಟ್ರಾನ್ಸಾಕ್ಷನ್ ಫೇಲ್ಡ್ ಎಂದು ಬರುವಂತೆ ಮಾಡಿದ್ದಾನೆ. ರಶೀದಿಯಲ್ಲಿ ಟ್ರಾನ್ಸಾಕ್ಷನ್ ಫೇಲ್ಡ್ ಎಂದು ಬಂದಿದೆ ಎಂಬ ಕಾರಣ ನೀಡಿ ಆನ್ಲೈನ್ ಕ್ಲೈಂ ಬಗ್ಗೆ ದೂರು ನೀಡಿರುವುದು ಬೆಳಕಿಗೆ ಬಂದಿದೆ.

ಓದಿ:ವಿಶ್ವ ಕ್ಯಾನ್ಸರ್ ದಿನ 2021.. ಈ ವರ್ಷದ ಥೀಮ್​ ಏನು ಗೊತ್ತಾ!?

ಈತ ಈ ರೀತಿ ಮಾಡಿ ಎಟಿಎಂನಿಂದ 2 ಲಕ್ಷದ 24 ಸಾವಿರ ಹಣವನ್ನು ಪಡೆದು ಬ್ಯಾಂಕಿಗೆ ಮೋಸ ಮಾಡಿದ್ದಾನೆ ಎಂದು ಬ್ಯಾಂಕ್ ಮ್ಯಾನೇಜರ್ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ABOUT THE AUTHOR

...view details