ಮಂಗಳೂರು:ಜಿಲ್ಲೆಯಲ್ಲಿ ಕೊರೊನಾ ವೈರಸ್ ಹಾವಳಿಯಿಂದ ಸ್ತಬ್ಧವಾಗಿದ್ದ ಪ್ರವಾಸೋದ್ಯಮ ಮತ್ತೆ ಚೇತರಿಸಿಕೊಂಡಿದೆ. ಇದೀಗ ಪಣಂಬೂರು ಬೀಚ್ಗೆ ಜನಸಾಗರವೇ ಹರಿದು ಬರುತ್ತಿದೆ.
ಓದಿ:ಎಲ್ಲೇ ಹೋದರು ಇಬ್ಬರು ಫಾಲೋ ಮಾಡ್ತಾರೆ... ಪೊಲೀಸರ ಮೊರೆ ಹೋದ ಸರ್ಕಾರಿ ನೌಕರ

ಕರಾವಳಿ ಕರ್ನಾಟಕದಲ್ಲಿ ಕಡಲ ಕಿನಾರೆಗಳು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಹಲವು ಬೀಚ್ಗಳು ಸದಾ ಪ್ರವಾಸಿಗರಿಂದಲೇ ತುಂಬಿಕೊಳ್ಳುತ್ತವೆ. ಮಂಗಳೂರು ಪಣಂಬೂರು ಬೀಚ್ ಕೂಡ ಪ್ರವಾಸಿಗರ ಆಕರ್ಷಣೆಯ ತಾಣಗಳಲ್ಲೊಂದು. ಆದರೆ ಕಳೆದ ವರ್ಷ ಕೊರೊನಾ ಕಾಣಿಸಿಕೊಂಡ ಬಳಿಕ ಪಣಂಬೂರು ಪ್ರವಾಸಿ ತಾಣದಲ್ಲಿ ಪ್ರವಾಸಿಗರು ಬರುವುದು ಸ್ತಬ್ಧವಾಗಿತ್ತು. ಅನ್ಲಾಕ್ ಬಳಿಕ ಮತ್ತೆ ಪ್ರವಾಸಿಗರ ಸಂಖ್ಯೆ ಹೆಚ್ಚಲು ಆರಂಭಿಸಿದೆ.
ಪಣಂಬೂರು ಬೀಚ್ಗೆ ಪ್ರತಿನಿತ್ಯ ಸಾವಿರಾರು ಮಂದಿ ವೀಕ್ಷಣೆಗೆ ಬರುತ್ತಿದ್ದರೆ, ವಾರಾಂತ್ಯದಲ್ಲಿ ಬೀಚ್ಗೆ ಪ್ರವಾಸಿಗರ ದಂಡೇ ಆಗಮಿಸುತ್ತದೆ. ಸಮುದ್ರದ ನೀರಿನಲ್ಲಿ ಆಟ, ಬೋಟಿಂಗ್, ಮೋಜು ಮಾಡುವುದು ನಡೆಯುತ್ತಲೇ ಇದೆ. ಕೊರೊನಾ ಭಯವಿಲ್ಲದೆ ಪ್ರವಾಸಿಗರು ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ.