ಮಂಗಳೂರು:ಕೊರೊನಾ ಲಸಿಕೆಗಾಗಿ ಇಂದೂ ಕೂಡಾ ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಮುಂಭಾಗ ಜನ ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡು ಬಂದಿದೆ.
ಲಸಿಕೆಗಾಗಿ ಇಂದೂ ವೆನ್ಲಾಕ್ ಆಸ್ಪತ್ರೆಯಲ್ಲಿ ಸರತಿಸಾಲು - ಲಸಿಕೆ ಪಡೆಯಲು ಆಸ್ಪತ್ರೆ ಮುಂದೆ ಕ್ಯೂ
ಕೊರೊನಾ ವ್ಯಾಕ್ಸಿನ್ ಪಡೆಯಲು ಜನ ಶುಕ್ರವಾರ ಕೂಡ ಮಂಗಳೂರು ನಗರದ ವೆನ್ಲಾಕ್ ಆಸ್ಪತ್ರೆಯ ಮುಂಭಾಗ ಕ್ಯೂ ನಿಂತಿದ್ದರು.
hospital
ಮೊದಲ ಹಂತದ ಚಿಕಿತ್ಸೆ ಪಡೆಯುವವರು ಆನ್ಲೈನ್ ಮೂಲಕ ನೋಂದಣಿ ಮಾಡಬೇಕು ಎಂದು ಆದೇಶಿಸಲಾಗಿದೆ. ಆದರೆ, ಈ ಬಗ್ಗೆ ಮಾಹಿತಿ ಇಲ್ಲದೇ ಇಂದು ಕೂಡಾ ಸಾಕಷ್ಟು ಜನರು ಲಸಿಕೆ ಪಡೆಯಲು ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕೂಡಾ ಸರತಿ ಸಾಲಿನಲ್ಲಿ ಲಸಿಕೆಗಾಗಿ ಜನ ನಿಂತಿರುವುದು ಕಂಡು ಬಂತು.
ಗುರುವಾರ ಸಹ ಇದೇ ರೀತಿ ಜನ ಸೇರಿದ್ದು, ಕೋವ್ಯಾಕ್ಸಿನ್ ಲಸಿಕೆಯ ಕೊರತೆಯಿಂದ ಕೆಲವರು ವಾಪಸ್ ಹೋದ ಘಟನೆ ನಡೆದಿತ್ತು. ಇದರಿಂದ ಜಿಲ್ಲಾಡಳಿತದ ವಿರುದ್ಧ ಸಾಕಷ್ಟು ಆಕ್ರೋಶವೂ ವ್ಯಕ್ತವಾಗಿತ್ತು.
Last Updated : Apr 30, 2021, 10:59 PM IST