ಕರ್ನಾಟಕ

karnataka

ETV Bharat / state

ಎಲ್ಲವೂ ದಂಡದಿಂದಲೇ ಸಾಧ್ಯವಿಲ್ಲ, ವಾಹನ ಸವಾರರ ಮನ ಪರಿವರ್ತನೆ ಮುಖ್ಯ: ವೀರೇಂದ್ರ ಹೆಗ್ಗಡೆ - ಡಾ.ವೀರೇಂದ್ರ ಹೆಗ್ಗಡೆ

ದಂಡಕ್ಕಿಂತ ವಾಹನ ಸವಾರರ ಮನ ಪರಿವರ್ತನೆ ಮುಖ್ಯ. ಆ ನಿಟ್ಟಿನಲ್ಲಿ ಸರ್ಕಾರ 30 ದಿನಗಳ ಸಮಯಾವಕಾಶ ನೀಡಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

ಡಾ.ವೀರೇಂದ್ರ ಹೆಗ್ಗಡೆ

By

Published : Sep 14, 2019, 3:50 PM IST

ಮಂಗಳೂರು: ನೂತನವಾಗಿ ಜಾರಿಯಾಗಿರುವ ದಂಡ ನಿಯಮದ ಜತೆಗೆ ವಾಹನ ಸವಾರರ ಮನ ಪರಿವರ್ತನೆ ಮುಖ್ಯ. ಎಲ್ಲವೂ ದಂಡದಿಂದಲೇ ಸಾಧ್ಯವಿಲ್ಲ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ

ಅಪಘಾತಗಳು ಆಗುವ ಸಂಖ್ಯೆ, ಮರಣಗಳ ಸಂಖ್ಯೆಗಳನ್ನು ಕಂಡಾಗ ಸಂಕಟವಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಕಾಯ್ದೆಗಳ ಅಗತ್ಯತೆ ಇದೆ. ಬಹಳಷ್ಟು ಮಂದಿ ಅಪಘಾತಕ್ಕೆ ಬಲಿಯಾಗುತ್ತಲೇ ಇದ್ದಾರೆ. ಆದ್ದರಿಂದ ಶಿಸ್ತು ಪಾಲಿಸಲೇಬೇಕು. ಆದ್ದರಿಂದ ಸರ್ಕಾರ ಕನಿಷ್ಠ 30 ದಿನಗಳ ಕಾಲ ಸಮಯ ನೀಡಿ, ಜನರ ಮನ ಪರಿವರ್ತನೆ ಮಾಡಬೇಕು ಎಂದರು.

ABOUT THE AUTHOR

...view details