ಮಂಗಳೂರು:ಬೈಕ್‌ನಲ್ಲಿ ಹಿಂಬಾಲಿಸಿಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನ ಕಾಲುಗಳನ್ನು ಕಂಬಕ್ಕೆ ಕಟ್ಟಿ ಹಾಕಿ ಬಾಲಕಿಯ ತಂದೆ ಮತ್ತು ಸ್ನೇಹಿತರು ಥಳಿಸಿದ್ದಾರೆ. ಮುಲ್ಕಿಯ ಗ್ರಾಮವೊಂದರಲ್ಲಿ ಶನಿವಾರ ಈ ಘಟನೆ ನಡೆದಿದೆ. ಡಿಸೆಂಬರ್ 13ರಂದು ಆರೋಪಿಯು ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಎಂದು ಹೇಳಲಾಗಿದೆ.
ಈ ವಿಚಾರ ತಿಳಿದು ಬಾಲಕಿಯ ತಂದೆ ಮತ್ತು ಸ್ನೇಹಿತರಿಬ್ಬರು ಆರೋಪಿಯನ್ನು ಹಿಂಬಾಲಿಸಿಕೊಂಡು ಬಂದಿದ್ದರು. ಶನಿವಾರವೂ ಸಹ ಮತ್ತೆ ಬಾಲಕಿ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾನೆ. ಇದನ್ನು ಕಂಡು ಆಕೆಯ ತಂದೆ ಮತ್ತು ಸ್ನೇಹಿತರು ಆತನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.