ಕರ್ನಾಟಕ

karnataka

ETV Bharat / state

ರೋಟರಿ ಕ್ಲಬ್ ವತಿಯಿಂದ ವೈದ್ಯರು, ಸಿಬ್ಬಂದಿಗಳಿಗೆ ಪಿಪಿಇ ಕಿಟ್ ವಿತರಣೆ - PEE kits distributed to doctors by Rotary club

ರೋಟರಿ ಕ್ಲಬ್ ಸಹಯೋಗದಲ್ಲಿ ಅಳದಂಗಡಿಯ ಖ್ಯಾತ ವೈದ್ಯರಾದ ಶಶಿಧರ್ ಡೋಂಗ್ರೆ ಮತ್ತು ಸುಷ್ಮಾ ಡೋಂಗ್ರೆ ಇಬ್ಬರೂ ಲಾಕ್​​ ಡೌನ್​​​ನಿಂದ ಕೆಲಸ ಇಲ್ಲದೆ ತೀವ್ರ ತೊಂದರೆಯಲ್ಲಿರುವ ಅಳದಂಗಡಿ ಸುತ್ತಮುತ್ತಲಿನ ನಾಲ್ಕು ಗ್ರಾಮಗಳ ಬಡ ಕುಟುಂಬಗಳಿಗೆ ಸುಮಾರು 15 ಕ್ವಿಂಟಾಲ್ ಅಕ್ಕಿಯನ್ನು ನೀಡಿದರು.

PEE kits distributed to doctors by Rotary club
ರೋಟರಿ ಕ್ಲಬ್ ವತಿಯಿಂದ ವೈದ್ಯರು, ಸಿಬ್ಬಂದಿಗಳಿಗೆ ಪಿಪಿಇ ಕಿಟ್ ವಿತರಣೆ

By

Published : Apr 2, 2020, 11:56 PM IST

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರ ಮನವಿ ಮೇರೆಗೆ ಇಲ್ಲಿನ ರೋಟರಿ ಕ್ಲಬ್ ಹಾಗೂ ಆ್ಯನ್ಸ್ ಕ್ಲಬ್ ವತಿಯಿಂದ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿಗಳ ಸುರಕ್ಷತೆಗಾಗಿ ಪಿಪಿಇ ಕಿಟ್​​​​​ಗಳನ್ನು ಬುಧವಾರ ಆಸ್ಪತ್ರೆ ಆವರಣದಲ್ಲಿ ವಿತರಿಸಲಾಯಿತು. ಶಾಸಕ ಹರೀಶ್ ಪೂಂಜ ಅವರು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ವಿದ್ಯಾವತಿ ಅವರಿಗೆ ಕಿಟ್​​​​​ಗಳನ್ನು ಹಸ್ತಾಂತರಿಸಿದರು.

ರೋಟರಿ ಕ್ಲಬ್ ವತಿಯಿಂದ ವೈದ್ಯರು, ಸಿಬ್ಬಂದಿಗಳಿಗೆ ಪಿಪಿಇ ಕಿಟ್ ವಿತರಣೆ

ಈ ಬಗ್ಗೆ ಮಾಹಿತಿ ನೀಡಿದ ರೋಟರಿ ನಿಯೋಜಿತ ಅಧ್ಯಕ್ಷ ವಕೀಲ ಬಿ.ಕೆ. ಧನಂಜಯ ರಾವ್ ಅವರು, ಈಗಾಗಲೇ 50 ಪಿಪಿಇ ಕಿಟ್​​​​​​ಗಳನ್ನು ನೀಡಲಾಗಿದೆ. ಹಾಂಕಾಂಗ್​​​​​​​​​​​​​​​​​ನಲ್ಲಿರುವ ರೋಟರಿ ಸದಸ್ಯೆ ಮನೋರಮಾ ಭಟ್ ಅವರ ಪುತ್ರಿ ಅನ್ವಿತಾ ಅವರು ಕಿಟ್​​​​​​​ಗಳ ವ್ಯವಸ್ಥೆ ಮಾಡಿದ್ದಾರೆ. ಆದ್ಯತೆ ಮೇರೆಗೆ ಅವಶ್ಯಕತೆ ಇದ್ದಲ್ಲಿ ಇನ್ನಷ್ಟು ಕಿಟ್​​​​ಗಳಿಗೆ ವ್ಯವಸ್ಥೆ ಮಾಡಲಿದ್ದಾರೆ. ರೋಟರಿ ನಿಯೋಜಿತ ಕಾರ್ಯದರ್ಶಿ ಶ್ರೀಧರ್​​​​​​​​​​​​​ ಅವರು ಪೌರ ಕಾರ್ಮಿಕರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಇನ್ನಿತರ ಅಗತ್ಯ ಸಾಮಗ್ರಿಗಳ ಕಿಟ್ ವಿತರಿಸಲಿದ್ದಾರೆ ಎಂದು ಹೇಳಿದರು. ಆ್ಯನ್ಸ್ ಕ್ಲಬ್ ನೀಡಿದ ಬಟ್ಟೆಯಿಂದ ಮಾಸ್ಕ್ ಗಳನ್ನು ತಯಾರಿಸಿದ ಲಾಯಿಲದ ಟೈಲರ್ ರಮೇಶ ಬಂಗೇರ ಅವರು ಆಸ್ಪತ್ರೆಗೆ ಮಾಸ್ಕ್ ಹಸ್ತಾಂತರಿಸಿದರು. ಕಿಟ್​​​​ಗಳನ್ನು ಹಾಗೂ ಮಾಸ್ಕ್​​​​​​ಗಳನ್ನು ನೀಡಿದ ಸಂಸ್ಥೆಗೆ ಶಾಸಕರು ಕೃತಜ್ಞತೆ ಸಲ್ಲಿಸಿದರು.

ರೋಟರಿ ಕ್ಲಬ್ ಸಹಯೋಗದಲ್ಲಿ ಅಳದಂಗಡಿಯ ಖ್ಯಾತ ವೈದ್ಯರಾದ ಶಶಿಧರ್ ಡೋಂಗ್ರೆ ಮತ್ತು ಸುಷ್ಮಾ ಡೋಂಗ್ರೆ ಇಬ್ಬರೂ ಲಾಕ್​​ ಡೌನ್​​​ನಿಂದ ಕೆಲಸ ಇಲ್ಲದೆ ತೀವ್ರ ತೊಂದರೆಯಲ್ಲಿರುವ ಅಳದಂಗಡಿ ಸುತ್ತಮುತ್ತಲಿನ ನಾಲ್ಕು ಗ್ರಾಮಗಳ ಬಡ ಕುಟುಂಬಗಳಿಗೆ ಸುಮಾರು 15 ಕ್ವಿಂಟಾಲ್ ಅಕ್ಕಿಯನ್ನು ನೀಡಿದರು. ಈ ವೇಳೆ ರೋಟರಿ ಅಧ್ಯಕ್ಷ ಜಯರಾಮ್, ನಿಯೋಜಿತ ಕಾರ್ಯದರ್ಶಿ ಶ್ರೀಧರ್, ಸದಸ್ಯರಾದ ಪಿತಾಂಬರ ಹೆರಾಜೆ, ಮನೋರಮಾ ಭಟ್, ರಾಜಶ್ರೀ ಡಿ. ರಾವ್, ಡಾ. ದೀಪಾಲಿ ಡೋಂಗ್ರೆ, ವೈದ್ಯರಾದ ಡಾ. ಚಂದ್ರಕಾಂತ್, ಡಾ. ತಾರಕೇಸರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details