ಕಡಬ (ದಕ್ಷಿಣ ಕನ್ನಡ): ರಸ್ತೆಯಲ್ಲಿ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸಿ ತೆರಳಿದವರಿಗೆ, ಕಡಬ ಪೊಲೀಸರು ವ್ಹೀಲ್ ಲಾಕ್ ಮಾಡುವ ಮೂಲಕ ಶಾಕ್ ನೀಡಿದ್ದಾರೆ.
ಕಡಬ ಪೇಟೆಗೆ ಆಗಮಿಸುತ್ತಿದ್ದ ಕೆಲವರು ವಾಹನಗಳನ್ನು ಬೇಕಾಬಿಟ್ಟಿಯಾಗಿ ರಸ್ತೆಯಲ್ಲೇ ನಿಲ್ಲಿಸಿ ತೆರಳುತ್ತಿದ್ದರು. ಈ ಬಗ್ಗೆ ಈಟಿವಿ ಭಾರತವು ಎರಡು ದಿನಗಳ ಹಿಂದೆ ವರದಿ ಬಿತ್ತರಿಸಿತ್ತು. ಇದೀಗ ಇಂತಹ ವಾಹನಗಳನ್ನು ಗಮನಿಸಿದ ಕಡಬ ಪೊಲೀಸರು ಇಂದು ಪೇಟೆಗೆ ಆಗಮಿಸಿ, ವ್ಹೀಲ್ ಲಾಕ್ ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಕಡಬದಲ್ಲಿ ರಸ್ತೆಯಲ್ಲೇ ವಾಹನ ನಿಲುಗಡೆ ಕಡಬ ಪೇಟೆಯುದ್ದಕ್ಕೂ ರಸ್ತೆಯಲ್ಲೇ ವಾಹನಗಳ ನಿಲುಗಡೆ
ಈ ಮೂಲಕ ಕಡಬ ಪೊಲೀಸರು ಪೇಟೆಯ ಟ್ರಾಫಿಕ್ ಸಮಸ್ಯೆಗೆ ಕೊಂಚ ಮಟ್ಟಿನ ಪರಿಹಾರವನ್ನು ಕಲ್ಪಿಸಿದ್ದಾರೆ. ಆದರೆ, ಕಡಬವು ತಾಲೂಕು ಕೇಂದ್ರವಾಗಿ ಮತ್ತು ಪಟ್ಚಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ್ದು, ಪೇಟೆಯಲ್ಲಿ ಇನ್ನೂ ವಾಹನ ದಟ್ಟಣೆ ಹೆಚ್ಚಾಗುತ್ತದೆ.
ಕಡಬದಲ್ಲಿ ರಸ್ತೆಯಲ್ಲೇ ವಾಹನ ನಿಲುಗಡೆ ಈ ಹಿನ್ನೆಲೆಯಲ್ಲಿ ಕಡಬದಲ್ಲಿ ಸುಸಜ್ಜಿತವಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಕನಿಷ್ಠ ಪಕ್ಷ ನೋ ಪಾರ್ಕಿಂಗ್ ನಾಮಫಲಕಗಳನ್ನಾದರೂ ಪೇಟೆಯಲ್ಲಿ ಅಳವಡಿಸಲು ಸ್ಥಳೀಯಾಡಳಿತ ಮುಂದಾಗಬೇಕಾಗಿದೆ.