ಸುಳ್ಯ: ತಾಲೂಕಿನ ಪಂಜ ಸಮೀಪದ ಪಲ್ಲೋಡಿಯಲ್ಲಿ ಸುಮಾರು ನಾಲ್ಕು ದಿನಗಳಿಂದ ಅಸ್ವಸ್ಥಗೊಂಡು ಮನೆಯಿಂದ ಹೊರಗೆ ಬರಲಾಗದ ಸ್ಥಿತಿಯಲ್ಲಿದ್ದ ಯುವಕನನ್ನು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಆಸ್ಪತ್ರೆಗೆ ದಾಖಲಿಸಿದೆ.
ಅಸ್ವಸ್ಥಗೊಂಡು ಮನೆಯಲ್ಲಿದ್ದ ಯುವಕನನ್ನು ಆಸ್ಪತ್ರೆಗೆ ಸೇರಿಸಿದ ಪಂಜ ಗ್ರಾಪಂ - ಪಂಜ ಗ್ರಾಮ ಪಂಚಾಯತ್
ಪಲ್ಲೋಡಿ ಕಾಲೋನಿಯ ನಿವಾಸಿ ರಾಜು ಎಂಬುವವರು ಮನೆಯಲ್ಲಿ ಜಾರಿ ಬಿದ್ದು, ಮೇಲೆ ಏಳಲಾಗದೆ ಅಸ್ವಸ್ಥಗೊಂಡಿದ್ದರು. ಮನೆಯಲ್ಲಿ ಏಕಾಂಗಿಯಾಗಿ ಇದ್ದುದರಿಂದ ಈ ಘಟನೆಯು ಹೊರಗಿನವರಿಗೆ ತಿಳಿದಿರಲಿಲ್ಲ.
ಪಲ್ಲೋಡಿ ಕಾಲೋನಿಯ ನಿವಾಸಿ ರಾಜು ಎಂಬುವವರು ಮನೆಯಲ್ಲಿ ಜಾರಿ ಬಿದ್ದು, ಮೇಲೆ ಏಳಲಾಗದೆ ಮನೆಯೊಳಗೆ ಇದ್ದರು. ಅಲ್ಲದೇ, ಆಹಾರವಿಲ್ಲದೆ ಅಸ್ವಸ್ಥಗೊಂಡಿದ್ದರು. ಮನೆಯಲ್ಲಿ ಏಕಾಂಗಿಯಾಗಿ ಇದ್ದುದರಿಂದ ಈ ಘಟನೆಯು ಹೊರಗಿನವರಿಗೆ ತಿಳಿದಿರಲಿಲ್ಲ.
ವಿಷಯ ಗಮನಕ್ಕೆ ಬಂದ ಪಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ನಿರ್ಮಲಾ ಪಲ್ಲೋಡಿ ಈ ವಿಷಯವನ್ನು ಪಂಜ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು ಅವರ ಗಮನಕ್ಕೆ ತಂದಿದ್ದಾರೆ. ಬಳಿಕ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಣಿಯಾನ ಪುರುಷೋತ್ತಮ, ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ರಾಜು ಅವರನ್ನು ಅಂಬುಲೆನ್ಸ್ ನಲ್ಲಿ ಕರೆದೊಯ್ದು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.