ಪುತ್ತೂರು (ಮಂಗಳೂರು):ಇಲ್ಲಿನ ಕಬಕದ ಬಸ್ ತಂಗುದಾಣದಲ್ಲಿ ಅಸ್ವಸ್ಥಗೊಂಡಿದ್ದ ವ್ಯಕ್ತಿಯನ್ನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪುತ್ತೂರು ಶಾಸಕರ ವಾರ್ರೂಮ್ ಸದಸ್ಯರ ನೇತೃತ್ವದಲ್ಲಿ ತಾತ್ಕಾಲಿಕ ಆಶ್ರಯತಾಣಕ್ಕೆ ಸೇರಿಸಿ ಮಾನವೀಯ ಕಾರ್ಯ ಮಾಡಿದ್ದಾರೆ.
ಅಸ್ವಸ್ಥಗೊಂಡಿದ್ದ ವ್ಯಕ್ತಿಯನ್ನ ಆಶ್ರಯ ತಾಣಕ್ಕೆ ಸೇರಿಸಿ ಮಾನವೀಯತೆ ಮೆರೆದ ಗ್ರಾಪಂ ಸದಸ್ಯರು - ಪುತ್ತೂರು
ಕಬಕದ ಬಸ್ ತಂಗುದಾಣದಲ್ಲಿ ಹಿಂದಿ ಮಾತನಾಡುತ್ತಿದ್ದ ವ್ಯಕ್ತಿ ಅಸ್ವಸ್ಥಗೊಂಡಿದ್ದ, ಇದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಸದಸ್ಯರು ಆತನನ್ನು ಮಾತನಾಡಿಸಿದ್ದು, ಹೆಸರು ಸುಂದರ್ ಎಂದು ತಿಳಿಸಿದ್ದಾನೆ. ಆತನನ್ನು ಪುತ್ತೂರು ಶಾಸಕರ ವಾರ್ರೂಮ್ನ ಪುರುಷೋತ್ತಮ ಮುಂಗ್ಲಿಮನೆ ಅವರ ನೇತೃತ್ವದಲ್ಲಿ ಆತನನ್ನು ಆಶ್ರಯ ತಾಣಕ್ಕೆ ಸೇರಿಸಿದ್ದಾರೆ.
ಅಸ್ವಸ್ಥಗೊಂಡಿದ್ದ ವ್ಯಕ್ತಿಯನ್ನ ಆಶ್ರಯ ತಾಣಕ್ಕೆ ತಲುಪಿಸಿ ಮಾನವೀಯತೆ ಮೆರೆದ ಗ್ರಾ ಪಂ ಸದಸ್ಯರು
ಕಬಕದ ಬಸ್ ತಂಗುದಾಣದಲ್ಲಿ ಹಿಂದಿ ಮಾತನಾಡುತ್ತಿದ್ದ ವ್ಯಕ್ತಿ ಅಸ್ವಸ್ಥಗೊಂಡಿದ್ದ, ಇದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಸದಸ್ಯರು ಆತನನ್ನು ಮಾತನಾಡಿಸಿದ್ದು, ಹೆಸರು ಸುಂದರ್ ಎಂದು ತಿಳಿಸಿದ್ದಾನೆ. ಆದರೆ, ಯಾವ ಊರು ಎಂಬುದನ್ನು ಮಾತ್ರ ಹೇಳುತ್ತಿಲ್ಲ. ಬಳಿಕ ಸದಸ್ಯರು ಪುತ್ತೂರು ಶಾಸಕರ ವಾರ್ರೂಮ್ನ ಪುರುಷೋತ್ತಮ ಮುಂಗ್ಲಿಮನೆ ಅವರ ನೇತೃತ್ವದಲ್ಲಿ ಆತನನ್ನು ಆಶ್ರಯ ತಾಣಕ್ಕೆ ಸೇರಿಸಿದ್ದಾರೆ.
ನೆಲ್ಲಿಕಟ್ಟೆ ಬಳಿ ಕೋವಿಡ್ ಸಮಯದಲ್ಲಿ ನಿರ್ಮಿಸಿದ್ದ ಭಿಕ್ಷುಕರ ಆಶ್ರಯ ತಾಣಕ್ಕೆ ಸೇರಿಸಿ ಮಾನವೀಯ ಕಾರ್ಯ ಮಾಡಿದ್ದಾರೆ.