ಮಂಗಳೂರು:ಕೊರೊನಾ ಲಾಕ್ಡೌನ್ ವೇಳೆ ರೈತರು ಬೆಳೆದಿರುವ ತರಕಾರಿಗಳನ್ನು ಸೂಕ್ತ ಬೆಲೆ ನೀಡಿ ನಾವು ಖರೀದಿಸುತ್ತೇವೆ ಎಂದು ಪನಾಮ ನೇಚರ್ ಫ್ರೆಶ್ ಪ್ರೈವೆಟ್ ಲಿಮಿಟೆಡ್ನ ಸಿಇಓ ವಿವೇಕ್ ರಾಜ್ ಪೂಜಾರಿ ತಿಳಿಸಿದ್ದಾರೆ.
'ಕೃಷಿಕರೇ ಬೆಳೆ ಬಿಸಾಡಬೇಡಿ, ಮಾರುಕಟ್ಟೆ ಬೆಲೆಗಿಂತ ಒಂದು ರೂಪಾಯಿ ಹೆಚ್ಚು ನೀಡಿ ಖರೀದಿಸುತ್ತೇವೆ' - ಪನಾಮ ಉದ್ಯಮಿ
ಲಾಕ್ಡೌನ್ ವೇಳೆ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ತರಕಾರಿಗಳನ್ನು ರಸ್ತೆ, ಚರಂಡಿಗೆ ಎಸೆದಿರುವುದನ್ನು ಗಮನಿಸಿದ ಪನಾಮ ನೇಚರ್ ಫ್ರೆಶ್ ಕಂಪನಿಯು ಇದೀಗ ರೈತರ ತರಕಾರಿಗಳನ್ನು ಖರೀದಿಸಲು ಪ್ಲಾನ್ ಹಾಕಿಕೊಂಡಿದೆ.
ಪನಾಮ ಉದ್ಯಮಿ
ಕೊರೊನಾ ಲಾಕ್ಡೌನ್ ವೇಳೆ ರೈತರು ತಮ್ಮ ಬೆಳೆಗೆ ಸೂಕ್ತ ಬೆಲೆ ಸಿಗದೆ ತರಕಾರಿಗಳನ್ನು ರಸ್ತೆ, ಚರಂಡಿಗೆ ಎಸೆದಿರುವುದನ್ನು ಗಮನಿಸಿದ್ದೇನೆ. ಇದಕ್ಕಾಗಿ ರಾಜ್ಯದಲ್ಲಿ ರೈತರು ತಮ್ಮ ಬೆಳೆಗಳನ್ನು ಎಸೆಯದೆ ನಮಗೆ ನೀಡಿದರೆ ಅವರಿಗೆ ನಿಗದಿತ ಬೆಲೆಗಿಂತ ಒಂದು ರೂಪಾಯಿ ಜಾಸ್ತಿ ನೀಡಿ ಖರೀದಿಸುತ್ತೇವೆ ಎಂದು ತಿಳಿಸಿದ್ದಾರೆ.
ಈ ಖರೀದಿ ಪ್ರಕ್ರಿಯೆಗಾಗಿ ಪನಮಾ ಸಂಸ್ಥೆ 75 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದರು. ಬೆಳೆಗಳನ್ನು ನೀಡುವವರು enquiries@panamacorporationltd.com ಇಮೇಲ್ಗೆ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ