ಕರ್ನಾಟಕ

karnataka

ETV Bharat / state

ಜನರ ಪ್ರೀತಿ ವಿಶ್ವಾಸವೇ ನನ್ನನ್ನು ರಾಷ್ಟ್ರಪತಿ, ಪ್ರಧಾನಿ ಎದುರು ನಿಲ್ಲಿಸಿತು: ಪದ್ಮಶ್ರೀ ಹರೇಕಳ ಹಾಜಬ್ಬ - ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶಿಕ್ಷಣ ಸಂತ ಹರೇಕಳ ಹಾಜಬ್ಬ

ಹಲವರಂತೆ ನನ್ನ ಬಡತನವೂ ನನ್ನ ವಿದ್ಯಾಭ್ಯಾಸವನ್ನು ನುಂಗಿಹಾಕಿತು, ಆದರೆ ಇತರ ಬಡ ಜನರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎನ್ನುವ ಸದುದ್ದೇಶದಿಂದ ಕಿತ್ತಳೆ ಹಣ್ಣು ಮಾರುವ ಕಾಯಕದೊಂದಿಗೆ ಶಾಲೆ ನಿರ್ಮಾಣದ ಕನಸು ಹೊಂದಿ, ಎಲ್ಲರ ಸಹಕಾರದಿಂದ ಸಾಕಾರಗೊಳಿಸಿದೆ ಎಂದು ಶಿಕ್ಷಣ ಸಂತ ಹರೇಕಳ ಹಾಜಬ್ಬ ಹೇಳಿದರು.

harekala-hajabba-gets-facilitated
ಪದ್ಮಶ್ರೀ ಹರೇಕಳ ಹಾಜಬ್ಬ

By

Published : Dec 8, 2021, 4:09 AM IST

Updated : Dec 8, 2021, 4:23 AM IST

ಕಡಬ:ನನ್ನ ಬಡತನ, ಅನಕ್ಷರತೆಯು ನನಗೆ ಸಾಧನೆಯೆ ಪಥದಲ್ಲಿ ಸಾಗಲು ಮೂಲ ಪ್ರೇರಣೆಯಾಯಿತು. ಜನರ ಪ್ರೀತಿ ವಿಶ್ವಾಸವೇ ಬಡವನಾದ ನನ್ನನ್ನು ಗೌರವಾನ್ವಿತ ರಾಷ್ಟ್ರಪತಿ, ಪ್ರಧಾನಿಗಳ ಮುಂದೆ ತಂದು ನಿಲ್ಲಿಸಿತು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶಿಕ್ಷಣ ಸಂತ ಹರೇಕಳ ಹಾಜಬ್ಬ ಹೇಳಿದರು.

ಸನ್ಮಾನ ಸ್ವೀಕರಿಸಿದ ಶಿಕ್ಷಣ ಸಂತ ಹರೇಕಳ ಹಾಜಬ್ಬ

ಮಂಗಳವಾರ ಕಡಬ ಸಮೀಪದ ಪಿಜಕಳ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಹಲವರಂತೆ ನನ್ನ ಬಡತನವೂ ನನ್ನ ವಿದ್ಯಾಭ್ಯಾಸವನ್ನು ನುಂಗಿಹಾಕಿತು, ಆದರೆ ಇತರ ಬಡ ಜನರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎನ್ನುವ ಸದುದ್ದೇಶದಿಂದ ಕಿತ್ತಳೆ ಹಣ್ಣು ಮಾರುವ ಕಾಯಕದೊಂದಿಗೆ ಶಾಲೆ ನಿರ್ಮಾಣದ ಕನಸು ಹೊಂದಿ, ನಂತರ ಅದನ್ನು ಊರಿನ ಹಿರಿಯರು, ದಾನಿಗಳು, ಜನಪ್ರತಿನಿಧಿಗಳ ಸಹಕಾರದಿಂದ ಸಾಕಾರಗೊಳಿಸಿದೆ ಎಂದರು.

ಪದ್ಮಶ್ರೀ ಹರೇಕಳ ಹಾಜಬ್ಬನವರಿಗೆ ಸನ್ಮಾನ

ನನ್ನ ಬದುಕು, ಕುಟುಂಬಕ್ಕಾಗಿ ಏನನ್ನೂ ಮಾಡಿಕೊಳ್ಳದೆ, ಸಮಾಜಕ್ಕಾಗಿ ನನ್ನನ್ನು ಸಮರ್ಪಿಸಿಕೊಂಡಿದ್ದರಿಂದ ಮಾಧ್ಯಮಗಳೂ ಸೇರಿದಂತೆ ಎಲ್ಲರೂ ನನ್ನನ್ನು ಗುರುತಿಸುವಂತಾಗಿ ಹಲವು ಗಣ್ಯರೆದುರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಂತಾಯಿತು. ರಾಷ್ಟ್ರಪತಿಗಳು, ಪ್ರಧಾನಿಯವರನ್ನು ಹತ್ತಿರದಿಂದ ಕಾಣುವ ಸೌಭಾಗ್ಯವೂ ದೊರೆಯಿತು. ಸಾಧನೆಗೆ ಬಡತನ ಯಾವತ್ತೂ ಅಡ್ಡಿಯಗಬಾರದು, ಪ್ರಾಮಾಣಿಕತೆ, ನಿಷ್ಠೆ ಇದ್ದರೆ ಜೀವನದಲ್ಲಿ ಏನನ್ನೂ ಸಾಧಿಸಬಹುದು ಎಂದು ಅವರು ಹೇಳಿದರು.

ಇದನ್ನೂ ಓದಿ:ತುಮಕೂರು: ಶಾಲೆಗೆ ಬಾರದ ವಿದ್ಯಾರ್ಥಿ ಕರೆತರಲು ಹೋದ ಶಿಕ್ಷಕನ ಮೇಲೆ ಪಾನಮತ್ತ ಇಬ್ಬರಿಂದ ಹಲ್ಲೆ

Last Updated : Dec 8, 2021, 4:23 AM IST

ABOUT THE AUTHOR

...view details