ಬೆಳ್ತಂಗಡಿ: ಆಕಾಶವಾಣಿಯ ಪಾಡ್ದನ ಹಾಡುಗಾರ್ತಿ ಅಕ್ಕಮ್ಮ ಇಂದು ನಿಧನ ಹೊಂದಿದ್ದಾರೆ.
ಬೆಳ್ತಂಗಡಿ: ಸಾಂಪ್ರದಾಯಿಕ ತುಳು ಪಾಡ್ದನ ಹಾಡುಗಾರ್ತಿ ನಿಧನ - ಪಾಡ್ದನ ಹಾಡುಗಾರ್ತಿ ಅಕ್ಕಮ್ಮ ನಿಧನ
ಆಕಾಶವಾಣಿಯ ಪಾಡ್ದನ ಹಾಡುಗಾರ್ತಿ, ಕಡಿರುದ್ಯಾವರ ಗ್ರಾಮದ ಎರ್ಮಾಲ್ ಪಲ್ಕೆ ನಿವಾಸಿ ಅಕ್ಕಮ್ಮ (72) ಇಂದು ಹೃದಯಾಘಾತದಿಂದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕಡಿರುದ್ಯಾವರ ಗ್ರಾಮದ ಎರ್ಮಾಲ್ ಪಲ್ಕೆ ನಿವಾಸಿ ಅಕ್ಕಮ್ಮ (72) ಇಂದು ಹೃದಯಾಘಾತದಿಂದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಸರಳ ಜೀವಿಯಾಗಿದ್ದ ಅಕ್ಕಮ್ಮ ಅವರು ಕೃಷಿ ಕೂಲಿ ಕಾರ್ಮಿಕರಾಗಿ, ಬಾಣಂತಿಯರ ಉಪಚಾರಕಿಯಾಗಿ ಪ್ರಸಿದ್ಧಿ ಪಡೆದಿದ್ದರು. ಸಾಂಪ್ರದಾಯಿಕ ತುಳು ಪಾಡ್ದನ ಹಾಡುಗಾರಿಕೆಯ ನೈಪುಣ್ಯತೆ ಹೊಂದಿದ್ದ ಅವರು ಮಿತ್ತಬಾಗಿಲಿನ ಕೇಶವ ಫಡ್ಕೆ ಅವರ ಸಹಾಯದಿಂದ ಕಳೆದ 30 ವರ್ಷಗಳಿಂದ ಮಂಗಳೂರು ಆಕಾಶವಾಣಿಯಲ್ಲಿ ಪಾಡ್ದನ ಕಾರ್ಯಕ್ರಮ ನೀಡುತ್ತಿದ್ದು, ಹಿರಿಯ ಕಲಾವಿದರಾಗಿದ್ದರು. ಸದ್ಯ ತಮ್ಮ ಮಕ್ಕಳಾದ ಸರೋಜಿನಿ, ಪುಷ್ಪಾ, ಚಂದ್ರಶೇಖರ ಮತ್ತು ಸದಾನಂದ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.